ಜಪಾನ್‌ನ ವಿಶ್ವವಿದ್ಯಾಲಯದ ಜೊತೆ ಆಳ್ವಾಸ್ ಕಾಲೇಜು ಶೈಕ್ಷಣಿಕ ಒಡಂಬಡಿಕೆ

Update: 2024-12-16 16:54 GMT

ಮೂಡುಬಿದಿರೆ: ಜಪಾನ್‌ನ ಸೋಜೊ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆ್ಯಂಡ್ ಗ್ರಾಜ್ಯುವೇಟ್ ಸ್ಕೂಲ್ ಆಫ್ ಇಂಜಿನಿಯರಿಂಗ್ ಜೊತೆ ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು ಮಹತ್ವದ ಶೈಕ್ಷಣಿಕ ವಿನಿಮಯ ಒಡಂಬಡಿಕೆಯನ್ನು ಸೋಮವಾರ ಮಾಡಿಕೊಂಡಿತು.

ಶಿಕ್ಷಣ, ಸಂಶೋಧನೆ, ಬೋಧಕ, ಆಡಳಿತ ವರ್ಗ, ಸಂಶೋಧನಾ ಪ್ರಕಟಣೆಗಳು ಸೇರಿದಂತೆ ವಿವಿಧ ವಲಯದಲ್ಲಿ ಪರಸ್ಪರ ಸ್ವಾತಂತ್ರ್ಯವನ್ನು ಕಾಯ್ದುಕೊಂಡು ವಿನಿಮಯ, ಬೌದ್ಧಿಕ ಆಸ್ತಿಗಳ ರಕ್ಷಣೆ ಸೇರಿದಂತೆ ಶೈಕ್ಷಣಿಕ ಅಭ್ಯುದಯದ ದೃಷ್ಟಿಯ ಐದು ವರ್ಷಗಳ ಒಪ್ಪಂದಕ್ಕೆ ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಹಾಗೂ ಫ್ಯಾಕಲ್ಟಿ ಆ್ಯಂಡ್ ಗ್ರಾಜ್ಯುವೇಟ್ ಸ್ಕೂಲ್ ಆಫ್ ಇಂಜಿನಿಯರಿಂಗ್ ಅಧ್ಯಕ್ಷ ಡಾ.ನಗಾಟೊ ಒನೊ ಸಹಿ ಮಾಡಿದರು.

ಶೈಕ್ಷಣಿಕ ವಿನಿಮಯಕ್ಕೆ ಸಂಬಂಧಿಸಿದ ಬೋಧನೆ, ವಸತಿ ಸೌಕರ್ಯ, ಆರ್ಥಿಕ ಜವಾಬ್ದಾರಿ, ಬೌದ್ಧಿಕ ಆಸ್ತಿ ರಕ್ಷಣೆ, ಅವಧಿ, ತಿದ್ದುಪಡಿ ಸೇರಿದಂತೆ ಪ್ರಮುಖ ವಿಚಾರಗಳನ್ನು ಒಡಂಬಡಿಕೆ ಒಳಗೊಂಡಿದೆ.

ಈ ಸಂದರ್ಭ ಜಪಾನ್‌ನ ಸೋಜೊ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆ್ಯಂಡ್ ಗ್ರಾಜ್ಯುವೇಟ್ ಸ್ಕೂಲ್ ಆಫ್ ಇಂಜಿನಿಯರಿಂಗ್‌ನ ಪರಿಣಾಮಕಾರಿ ಇಜಿನಿಯರಿಂಗ್‌ನ ಪ್ರಗತಿ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ. ರುಚಿ ಥೋಮೊಶಿಗೆ, ಸೋಜೊ ಅಂತರ್‌ ರಾಷ್ಟ್ರೀಯ ಕೇಂದ್ರದ ವ್ಯವಸ್ಥಾಪಕಿ ಮಿಯೆ ಒಕುಬೊ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಅಕಿಸಾ ಮೊರಿ ಹಾಗೂ ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಸತ್ಯನಾರಾಯಣ ಇದ್ದರು. ಡಾ. ಗುರಶಾಂತ್ ವಗ್ಗರ್ ಕರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News