ಯುಪಿಎಸ್ಸಿ ಇಂಜಿನಿಯರಿಂಗ್ ಸರ್ವೀಸಸ್ ಪರೀಕ್ಷೆಯಲ್ಲಿ ಹಿಮಾಂಶು ಥಾಪ್ಲಿಯಾಲ್‌ಗೆ ಪ್ರಥಮ ರ್ಯಾಂಕ್
Update: 2024-12-16 16:49 GMT
ಸುರತ್ಕಲ್: ಇಲ್ಲಿನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ 2023ನೇ ಬ್ಯಾಚ್ ನ ಎಂಟೆಕ್ ವಿಭಾಗದ ಹಳೆಯ ವಿದ್ಯಾರ್ಥಿ ಹಿಮಾಂಶು ಥಾಪ್ಲಿಯಾಲ್ ಯುಪಿಎಸ್ಸಿ ಇಂಜಿನಿಯರಿಂಗ್ ಸರ್ವೀಸಸ್ ಪರೀಕ್ಷೆಯಲ್ಲಿ ಅಖಿಲ ಭಾರತದಲ್ಲಿ 1ನೇ ರ್ಯಾಂಕ್ ಗಳಿಸಿದ್ದಾರೆ.
ಉತ್ತರಾಖಂಡದಲ್ಲಿ ಹುಟ್ಟಿ ಲಕ್ನೋದಲ್ಲಿ ಬೆಳೆದ ಹಿಮಾಂಶು ಥಾಪ್ಲಿಯಾಲ್ ಜೆಇಇ ಪರೀಕ್ಷೆಯಲ್ಲಿ 5,83,000 ಅಂಕ ಗಳೊಂದಿಗೆ ತಮ್ಮ ಶೈಕ್ಷಣಿಕ ಪ್ರಯಾಣವನ್ನು ಪ್ರಾರಂಭಿಸಿದ್ದರು. ಅವರ ದೃಢನಿಶ್ಚಯ ಮತ್ತು ಕಠಿಣ ಪರಿಶ್ರಮವು ಇಂಜಿನಿಯರಿಂಗ್ ಸೇವೆಗಳಲ್ಲಿ ಎಐಆರ್ 1ನೇ ಸ್ಥಾನವನ್ನು ಸಂಪಾದಿಸಲು ಕಾರಣವಾಯಿತು. ಅವರು ಪಿಥೋರಗಢದ ಎನ್ಪಿಎಸ್ಇಐನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ನಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ. 2021-2023ರಲ್ಲಿ ಎನ್ಐಟಿ ಕರ್ನಾಟಕದಲ್ಲಿ ನ್ಯಾನೊ ತಂತ್ರಜ್ಞಾನದಲ್ಲಿ ಎಂಟೆಕ್ ಪದವಿ ಪಡೆದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಹಿಮಾಂಶು ಅವರು ಲಕ್ಷ್ಮಿ ಮತ್ತು ಶಂಭು ಅವರ ಪತ್ರ.