ಮಹಿಳೆ ನಾಪತ್ತೆ
Update: 2024-12-16 15:35 GMT
ಮಂಗಳೂರು : ನಗರದ ಕಾರ್‌ಸ್ಟ್ರೀಟ್‌ನಲ್ಲಿ ಕೆಲಸ ಮಾಡಿಕೊಂಡಿರುವ ಕಾಶಿನಾಥ ಮುರ್ಮ ಎಂಬವರು ಪತ್ನಿ ಶಿಫಾಲಿ ಮುರ್ಮ (36)ಎಂಬಾಕೆ ಡಿ.14ರ ಬೆಳಗ್ಗೆ 9ರಿಂದ ಕಾಣೆಯಾದವರು ಮರಳಿ ಬಂದಿಲ್ಲ ಎಂದು ಪಾಂಡೇಶ್ವರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸುಮಾರು 5 ಅಡಿ ಎತ್ತರದ ಎಣ್ಣೆ ಬಿಳಿ ಮೈಬಣ್ಣದ ಈಕೆಯ ಮೂಗಿನ ಮೇಲೆ ಕಪ್ಪುಎಳ್ಳು ಮಚ್ಚೆ ಇರುತ್ತದೆ. ಕಾಣೆಯಾದಾಗ ಬೂದು ಬಣ್ಣದ ಚೂಡಿದಾರ ಧರಿಸಿರುತ್ತಾರೆ ಎಂದು ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.