ಹೊಸ ವರ್ಷಾಚರಣೆ: ಮಂಗಳೂರು ನಗರದಲ್ಲಿ ಪೊಲೀಸರಿಂದ ವಿಶೇಷ ನಿಗಾ
ಮಂಗಳೂರು: ಹೊಸ ವರ್ಷಾಚರಣೆ ಸಂದರ್ಭ ಸುರಕ್ಷತಾ ದೃಷ್ಟಿಯಿಂದ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ನಗರದಲ್ಲಿ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಿ ತಪಾಸಣೆ ನಡೆಸಲಾಗುವುದು. ಅತಿವೇಗ, ಅಜಾಗರೂಕತೆ ಚಾಲನೆ, ವೀಲಿಂಗ್-ಡ್ರಾಗ್ ರೇಸ್‌ಗಳಲ್ಲಿ ಭಾಗಿಯಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಅಮಲು ಪದಾರ್ಥ ಸೇವಿಸುವವರ ಮೇಲೆ ವಿಶೇಷ ನಿಗಾ ವಹಿಸಲಾಗುವುದು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು, ವಾಹನ ಸವಾರರು ಸೀಟ್ ಬೆಲ್ಟ್ ಧರಿಸಬೇಕು, ಪಾರ್ಕಿಂಗ್ ನಿಯಮ ಪಾಲಿಸಬೇಕು ಎಂದ ಕಮಿಷನರ್ ಸಾರ್ವಜನಿಕರಿಗೆ ತೊಂದರೆಯಾಗುವಂತಹ ಘಟನೆ ಕಂಡು ಬಂದಲ್ಲಿ ಪೊಲೀಸ್ ಸಹಾಯವಾಣಿಗೆ 112ಗೆ ಮಾಹಿತಿ ನೀಡಬೇಕು. ‘ಸಂಚಾರ ನಿಯಮ ಪಾಲಿಸಿ, ಸುರಕ್ಷಿತೆಗೆ ಒತ್ತು ನೀಡೋಣ, ಶೂನ್ಯ ರಸ್ತೆ ಅಪಘಾತ ಹಾಗೂ ಸುರಕ್ಷಿತ’ ಹೊಸ ವರ್ಷವನ್ನು ಆಚರಿಸೋಣ ಎಂದು ತನ್ನ ಸಂದೇಶದಲ್ಲಿ ತಿಳಿಸಿದ್ದಾರೆ.