ಬಾಲಕಿಯರ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ
ಮಂಗಳೂರು: ದ.ಕ.ಜಿಲ್ಲಾ ಫುಟ್ಬಾಲ್ ಸಂಸ್ಥೆ , ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್,ಕೇಂದ್ರ ಸರಕಾರದ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಹಾಗೂ ಸಾಯಿ ಇದರ ಜಂಟಿ ಆಶ್ರಯದಲ್ಲಿ ನಗರದ ಕೆ.ಎಂ.ಸಿ ಮರೀನ ಗ್ರೀನ್ ಮೈದಾನ ದಲ್ಲಿ ಅಸ್ಮಿತ ಖೇಲೋ ಇಂಡಿಯ 17 ವರ್ಷದ ಒಳಗಿನ ಬಾಲಕಿಯರ ಫುಟ್ಬಾಲ್ ಪಂದ್ಯಾವಳಿ ಸೋಮವಾರ ಉದ್ಘಾಟನೆಗೊಂಡಿತು.
ಮಂಗಳೂರಿನ ಮಣಿಪಾಲ ಸ್ಕೂಲ್, ಮಂಗಳೂರು ಸ್ಪೋರ್ಟಿಂಗ್, ಉಳ್ಳಾಲದ ಪಾಂಡ್ಯರಾಜ್ ಬಳ್ಳಾಲ್, ಕೊಲ್ಯದ ಜೋಯ್ಲ್ಯಾಂಡ್ ಸ್ಕೂಲ್, ಬಜ್ಪೆಯ ಸೈಂಟ್ ಜೋಸೆಫ್ ಹೈಸ್ಕೂಲ್ ತಂಡ ಮತ್ತು ಉಡುಪಿಯ ವಿಕ್ಟೋರಿಯಾ ಅಕಾಡಮಿ ತಂಡ ಭಾಗವಹಿಸಲಿದೆ. ಲೀಗ್ ಮಾದರಿಯಲ್ಲಿ ನಡೆಯುವ ಈ ಪಂದ್ಯಾವಳಿ ಜ.೯ರವರೆಗೆ ನಡೆಯಲಿದೆ.
ಪಂದ್ಯಾವಳಿಯನ್ನು ಮಾಹೆ ಮಣಿಪಾಲದ ಮಂಗಳೂರು ಕ್ಯಾಂಪಸ್‌ನ ಪ್ರೊ.ವೈಸ್ ಚಾನ್ಸಲರ್ ಡಾ. ದಿಲೀಪ್ ಜಿ. ನಾಯಕ್ ಉದ್ಫಾಟಿಸಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಣಿಪಾಲ ಸ್ಕೂಲ್‌ನ ಪ್ರಾಂಶುಪಾಲೆ ಶ್ರೀಲತಾ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್‌ನ ಅಧ್ಯಕ್ಷ ಡಿಎಂ ಅಸ್ಲಂ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಹುಸೇನ್ ಬೋಳಾರ ಕಾರ್ಯಕ್ರಮ ನಿರೂಪಿದರು. ಸಂಸ್ಥೆಯ ವಿಜಯ ಸುವರ್ಣ, ಡಾ.ರಾಜ್ ವಲಂಜೆ , ಅಬ್ದುಲ್ ಲತೀಫ್, ಅಶ್ಫಾಕ್ ಉಪಸ್ಥಿತರಿದ್ದರು.