ಡಿಎಂಐಟಿ ಪರೀಕ್ಷೆ: ಮನ್‌ಶರ್ ಕಾಲೇಜಿನ ವಿದ್ಯಾರ್ಥಿನಿ ಮರಿಯಮ್ ಬೀವಿ ರಾಜ್ಯಕ್ಕೆ ಪ್ರಥಮ
Update: 2025-03-21 18:14 IST

ಮರಿಯಮ್ ಬೀವಿ
ಮಂಗಳೂರು: ಕರ್ನಾಟಕ ರಾಜ್ಯ ಪ್ಯಾರ ಮೆಡಿಕಲ್ ಬೋರ್ಡ್ ಅಧೀನದಲ್ಲಿರುವ ಡಿಎಂಐಟಿ ಪರೀಕ್ಷೆಯಲ್ಲಿ ಬೆಳ್ತಂಗಡಿಯ ಮನ್‌ಶರ್ ಪ್ಯಾರ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಮರಿಯಮ್ ಬೀವಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ್ದಾರೆ.
ಈಕೆ ಪೂಂಜಾಲಕಟ್ಟೆಯ ಅಬ್ದುಲ್ ಸಲಾಮ್ ತಂಙಳ್ ಮತ್ತು ಉಳ್ಳಾಲ ಶಮೀಮತ್ ಬೀವಿ ದಂಪತಿಯ ಪುತ್ರಿ.