ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಇಫ್ತಾರ್ ಕೂಟ
Update: 2025-03-21 18:16 IST

ಮಂಗಳೂರು, ಮಾ.21: ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಇಫ್ತಾರ್ ಕೂಟ ನಡೆಯಿತು. ಮುಖ್ಯ ಅತಿಥಿಯಾಗಿ ಆಯಿಶಾ ವಿದ್ಯಾ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಅಮೀನ್ ಅಹ್ಸನ್ ಭಾಗವಹಿಸಿ ಮಾತನಾಡಿ ದರು. ಆಡಳಿತ ಮಂಡಳಿಯ ಸಂಚಾಲಕ ಅಮಾನುಲ್ಲ ಖಾನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಂಶುಪಾಲೆ ಡಾ.ಹೇಮಲತ ಬಿ.ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಪ್ರಗತಿಪರ ಕೃಷಿಕ ಇದಿನಬ್ಬ, ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಇಮಾರತ್ ಅಲಿ, ಜೊತೆ ಕಾರ್ಯದರ್ಶಿ ಅಬ್ದುಲ್ಲಾಕುಂಞಿ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಮುಫೀದಾ, ಕಾರ್ಯದರ್ಶಿ ನಬೀಸತುಲ್ ಅಫ್ನ ಉಪಸ್ಥಿತರಿದ್ದರು. ಸುಖೈಬಾ ಕಿರಾಅತ್ ಪಠಿಸಿದರು. ಫಸೀಲಾ ಸ್ವಾಗತಿಸಿದರು. ಶಮ್ಯಾ ಕಾರ್ಯಕ್ರಮ ನಿರೂಪಿಸಿದರು.