ಮುಡಿಪು: ಅಟೋ ರಾಜಕನ್ಮಾರ್ ಸಂಘಟನೆಯಿಂದ ಸೌಹಾರ್ದ ಇಫ್ತಾರ್ ಸಂಗಮ

Update: 2025-03-22 17:26 IST
ಮುಡಿಪು: ಅಟೋ ರಾಜಕನ್ಮಾರ್ ಸಂಘಟನೆಯಿಂದ ಸೌಹಾರ್ದ ಇಫ್ತಾರ್ ಸಂಗಮ
  • whatsapp icon

ಕೊಣಾಜೆ : ಆಟೋ ರಾಜಕನ್ಮಾರ್ ಯೂನಿಯನ್ (ರಿ) ದ.ಕ.ಜಿಲ್ಲೆ ಇದರ ವತಿಯಿಂದ ಮುಡಿಪು ಅಟೋ ಚಾಲಕರು ಮತ್ತು ಮಾಲಕರ ವತಿಯಿಂದ ಶುಕ್ರವಾರ ಮುಡಿಪುವಿನಲ್ಲಿ ನಡೆದ ಬೃಹತ್ ಸೌಹಾರ್ದ ಇಫ್ತಾರ್ ಸಂಗಮ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗಿಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ನರಿಂಗಾನ ಕಂಬಳ ಸಮಿತಿ ಯು ಕಾರ್ಯಾಧ್ಯಕ್ಷರಾದ ಪ್ರಶಾಂತ್ ಕಾಜವ ಅವರು,‌ ಜಾತಿ, ಧರ್ಮಗಳ ನಡುವೆ ಧ್ವೇಷ ಬೀಜವಿತ್ತುವ ಈ ಕಾಲಘಟ್ಟದಲ್ಲಿ ಸಾಮರಸ್ಯ ಬೆಸೆ ಯುವ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ. ಮುಡಿಪುವಿನಲ್ಲಿ ಕಳೆದ ಹಲವು ವರ್ಷಗಳಿಂದ ಅಟೋ ರಾಜಕನ್ಮಾರ್ ಸಂಘಟನೆಯ ಮೂಲಕ ಸಾಮರಸ್ಯ ಮೂಡಿಸುವ ಅನೇಕ ಕಾರ್ಯಕ್ರಮಗಳು ನಡೆಯು ತ್ತಿರುವುದು ಶ್ಲಾಘನೀಯ ಎಂದರು.

ಆಟೋರಾಜಾಕನ್ಮಾರ್ ಅಧ್ಯಕ್ಷರಾದ ಸಿದ್ದೀಕ್ ಕೊಡಕ್ಕಲ್ ಮಾತನಾಡಿ, ನಮ್ಮದು ಸೌಹಾರ್ಧ ಇಫ್ತಾರ್ ಕೂಟ. ಇದರಲ್ಲಿ ಎಲ್ಲಾ ಜಾತಿ ಧರ್ಮದವರು ಪಾಲ್ಗೊಳ್ಳುತ್ತಾರೆ.

ನಮ್ಮ ಸಂಘಟನೆಯು ರಿಕ್ಷಾ ಚಾಲಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿವೆ. ಅಲ್ಲದೆ ಸಾಮಾಜಿಕ ಚಟುವಟಿಕೆ ಯಲ್ಲೂ ತೊಡಗಿಸಿಕೊಂಡಿದ್ದೇವೆ ಎಂದರು.

ಸದಸ್ಯರಾದ ಅಬ್ದುಲ್ ಜಲೀಲ್ ಅವರು ಮಾತನಾಡಿ, ಕಳೆದ ಐದು ವರ್ಷಗಳಿಂದ ಇಫ್ತಾರ್ ಕೂಟ ನಡೆ ಸುತ್ತಾ ಬರುತ್ತಿದ್ದೇವೆ..ಕಳೆದ ವರ್ಷ ಮುಡಿಪು ರಸ್ತೆಯ ಬದಿಯಲ್ಲಿ ಏರ್ಪಡಿಸಿದ್ದಾಗ ಸೌಹಾರ್ದತೆ ಯನ್ನು ಸಹಿಸದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ದೂಷಿಸಿದ್ದರು.

ಸೌಹಾರ್ದತೆಯನ್ನು ಉಸಿರಾಡುವ ನಾವು ಈ ಬಾರಿ ರಸ್ತೆಯ ಬದಲಾಗಿ ಮುಡಿಪು ಜಂಕ್ಷನ್ ಸಮೀಪ ಈ ಬಾರಿಯೂ‌ ಸೌಹಾರ್ದ ಇಫ್ತಾರ್ ಕೂಟ ಏರ್ಪಡಿಸಿದ್ದೇವೆ. ಸಾವಿರಾರು ಮಂದಿ ಪಾಲ್ಗೊಂಡಿದ್ದಾರೆ ಎಂದರು. ಎಐಯುಟಿಸಿ ಕೇರಳ ರಾಜ್ಯ ಉಪಾಧ್ಯಕ್ಷ ಮುಸ್ತಫಾ ಕಡಂಬಾರ್, ಆಟೋ ಪಾರ್ಕ್ ಮಾಜಿ ಅಧ್ಯಕ್ಷ ಪ್ರಸಾದ್ ಕುರ್ನಾಡು, ಸದಸ್ಯರಾದ ಪ್ರಸನ್ನ ಕುರ್ನಾಡು, ಜಯರಾಜ್ ಮಿತ್ತಕೋಡಿ, ಮಾಧವ ಮೂಳೂರು, ಆಟೋರಾಜಾಕನ್ಮಾರ್ ಪದಾಧಿಕಾರಿಗಳು ಭಾಗವಹಿಸಿದ್ದರು.



 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News