ಎಸ್ ವೈಎಸ್ ದ.ಕ. ವೆಸ್ಟ್ ಜಿಲ್ಲಾಧ್ಯಕ್ಷರಾಗಿ ಮಹ್ಬೂಬ್ ಸಖಾಫಿ ಕಿನ್ಯ ಆಯ್ಕೆ

Update: 2025-04-09 13:17 IST
ಎಸ್ ವೈಎಸ್ ದ.ಕ. ವೆಸ್ಟ್ ಜಿಲ್ಲಾಧ್ಯಕ್ಷರಾಗಿ ಮಹ್ಬೂಬ್ ಸಖಾಫಿ ಕಿನ್ಯ ಆಯ್ಕೆ
  • whatsapp icon

ಮಂಗಳೂರು: ಎಸ್ವೈಎಸ್ ದ.ಕ. ಜಿಲ್ಲಾ ವೆಸ್ಟ್ ಸಮಿತಿಯ ವತಿಯಿಂದ ಜಿಲ್ಲಾ ವಾರ್ಷಿಕ ಕೌನ್ಸಿಲ್ ಹಾಗೂ ಜಿಲ್ಲಾ ಕ್ಯಾಂಪ್ ಮರಿಕ್ಕಳದ ತಾಜುಲ್ ಫುಖಹಾಅ್ ನಗರದಲ್ಲಿ ಮಂಗಳವಾರ ಜರುಗಿತು.

ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ವಿ.ಯು.ಇಸ್ಹಾಕ್ ಝುಹ್ರಿ ಕಾನೆಕೆರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಎಸ್ವೈಎಸ್ ರಾಜ್ಯ ಕಾರ್ಯದರ್ಶಿ ಕೆ.ಎಂ.ಸಿದ್ದೀಕ್ ಮೋಂಟುಗೋಳಿ ಉದ್ಘಾಟಿಸಿದರು. ತ್ವಾಹಿರ್ ಸಖಾಫಿ ಮಂಜೇರಿ ಸಂಪನ್ಮೂಲ ವ್ಯಕ್ತಿಯಾಗಿ ತರಗತಿ ಮಂಡಿಸಿದರು.

ಎಸ್ವೈಎಸ್ ರಾಜ್ಯಾಧ್ಯಕ್ಷ ಹಫೀಳ್ ಸಅದಿ ಕೊಡಗು ಆಯ್ಕೆ ಪ್ರಕ್ರಿಯೆಗೆ ನೇತೃತ್ವ ನೀಡಿದರು. ಈ ಸಂದರ್ಭದಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆರಿಸಲಾಯಿತು.

ಅಧ್ಯಕ್ಷರಾಗಿ ಮೆಹಬೂಬ್ ಸಖಾಫಿ ಕಿನ್ಯ, ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯೀಲ್ ಮಾಸ್ಟರ್ ಮರಿಕ್ಕಳ, ಕೋಶಾಧಿಕಾರಿಯಾಗಿ ಅಬ್ದುರ್ರಝಾಕ್ ಭಾರತ್, ಸಂಘಟನಾ ಉಪಾಧ್ಯಕ್ಷರಾಗಿ ತೌಸೀಫ್ ಸಅದಿ ಹರೇಕಳ, ಬದ್ರುದ್ದೀನ್ ಅಝ್ಹರಿ ಕೈಕಂಬ (ದಅ್ವಾ ಮತ್ತು ತರಬೇತಿ), ಹಾಫಿಳ್ ಯಾಕೂಬ್ ಸಅದಿ (ಸಾಂತ್ವನ ಮತ್ತು ಇಸಾಬಾ), ನವಾಝ್ ಸಖಾಫಿ ಅಡ್ಯಾರ್ಪದವು (ಸೋಶಿಯಲ್ ಮತ್ತು ಕಲ್ಚರಲ್), ನಝೀರ್ ಹಾಜಿ ಲೂಲೂ (ಮೀಡಿಯಾ ಮತ್ತು ಐಟಿ), ಕಾರ್ಯದರ್ಶಿಗಳಾಗಿ ಮುತ್ತಲಿಬ್ ಮೂಡುಬಿದಿರೆ (ಸಂಘಟನೆ), ಮಹ್ಮೂದ್ ಸಅದಿ (ದಅ್ವಾ ಮತ್ತು ತರಬೇತಿ), ಫಾರೂಕ್ ಶೇಡಿಗುರಿ (ಸಾಂತ್ವನ ಮತ್ತು ಇಸಾಬಾ), ಖಾಲಿದ್ ಹಾಜಿ ಭಟ್ಕಳ (ಸೋಶಿಯಲ್ ಮತ್ತು ಕಲ್ಚರಲ್), ಹಸನ್ ಪಾಂಡೇಶ್ವರ (ಮೀಡಿಯಾ ಮತ್ತು ಐಟಿ) ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಸ್ಹಾಕ್ ಝುಹ್ರಿ ಕಾನೆಕೆರೆ, ಹಾಜಿ ಅಬ್ದುರ್ರಹ್ಮಾನ್ ಪ್ರಿಂಟೆಕ್, ನಝೀರ್ ಮುಡಿಪು, ಆಸಿಫ್ ಹಾಜಿ ಕೃಷ್ಣಾಪುರ, ಬಶೀರ್ ಸಖಾಫಿ ಉಳ್ಳಾಲ, ಇಸ್ಹಾಕ್ ಉಳ್ಳಾಲ,

ಇಬ್ರಾಹೀಂ ಸಖಾಫಿ ಸೆರ್ಕಳ, ರಶೀದ್ ಹಾಜಿ ವಗ್ಗ, ಹಕೀಂ ಪೂಮಣ್ಣು, ಹೈದರ್ ಮದನಿ ಸುರತ್ಕಲ್, ಹಾಫಿಳ್ ಮಜೀದ್ ಫಾಳಿಲಿ ಗಾಣೆಮಾರ್, ಇಬ್ರಾಹಿಂ ಅಹ್ಸನಿ ಮುಡಿಪು, ಶರೀಫ್ ಮುಡಿಪು, ಉಮರ್ ಮದನಿ ಬೋಳಿಯಾರ್, ಉಸ್ಮಾನ್ ಫಜೀರ್, ಕಾಸಿಂ ಲತೀಫಿ ಮಂಜನಾಡಿ, ಜಬ್ಬಾರ್ ಕಣ್ಣೂರು ಹಾಗೂ ರಾಜ್ಯ ಕೌನ್ಸಿಲರ್ ಗಳಾಗಿ 21 ಮಂದಿ ಆಯ್ಕೆಯಾದರು.

ಸಭೆಯಲ್ಲಿ ಮರಿಕ್ಕಳ ಜಮಾಅತ್ ಅಧ್ಯಕ್ಷ ಅಬ್ದುಲ್ ಜಲೀಲ್ ಮೋಂಟುಗೋಳಿ, ರಾಜ್ಯ ಆಯ್ಕೆ ಸಮಿತಿಯ ಅಧ್ಯಕ್ಷ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ರಾಜ್ಯ ನಾಯಕರಾದ ಖಲೀಲ್ ಮಾಲಿಕಿ ಬೋಳಂತೂರು, ಮುಹಮ್ಮದಲಿ ಸಖಾಫಿ ಅಶ್-ಅರಿಯ್ಯ, ಬಶೀರ್ ಮದನಿ ಕೂಳೂರು, ಆಸಿಫ್ ಹಾಜಿ ಕೃಷ್ಣಾಪುರ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಪ್ರಿಂಟೆಕ್ ಸ್ವಾಗತಿಸಿದರು. ಜಿಲ್ಲಾ ನೂತನ ಕೋಶಾಧಿಕಾರಿ ಅಬ್ದುರ್ರಝಾಕ್ ಭಾರತ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News