ನರ್ಸ್ ಕೋರ್ಸ್ ಗೆ ಬೇಡಿಕೆ ಹಾಗೂ ಭವಿಷ್ಯ ಇದೆ: ಡಾ.ಆಂಟನಿ ಸೈಲ್ವಾನ್ ಡಿಸೋಜ
ಉಳ್ಳಾಲ: ನರ್ಸ್ ಕೋರ್ಸ್ ಗೆ ಬೇಡಿಕೆ ಹಾಗೂ ಭವಿಷ್ಯ ಕೂಡಾ ಇದೆ. ಕಲಿಕೆಯಲ್ಲಿ ಉತ್ತಮ ತರಬೇತಿ ಪಡೆದು ಕೋರ್ಸ್ ಯಶಸ್ವಿ ಆಗಿ ಮುಗಿಸುವ ಜೊತೆಗೆ ಕಲಿಕೆಯನ್ನು ಸದುಪಯೋಗ ಪಡಿಸಿಕೊಂಡು ಆಸಕ್ತಿಯಿಂದ ಕಾರ್ಯನಿರ್ವಹಿಸಬೇಕು ಎಂದು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಡೀನ್ ಡಾ.ಆಂಟನಿ ಸೈಲ್ವಾನ್ ಡಿಸೋಜ ಹೇಳಿದರು.
ಕಣಚೂರು ಕಾಲೇಜು ಆಫ್ ನರ್ಸಿಂಗ್ ಸೈನ್ಸ್ ಇದರ ಆಶ್ರಯದಲ್ಲಿ ಗುರುವಾರ ನಡೆದ ದ್ವೀಪ ಪ್ರಜ್ವಲನೆ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ನರ್ಸ್ ಗೆ ಜವಾಬ್ದಾರಿ ಕೂಡಾ ಇದ್ದು, ಅದನ್ನು ಜಾಗೃತಿಯಿಂದ ಮಾಡಬೇಕಾಗಿದೆ. ಕಲಿಕೆಯಲ್ಲಿ ತರಬೇತಿ ನೀಡಲು ಶಿಕ್ಷಕರು ಇದ್ದಾರೆ. ಶಿಕ್ಷಕರ ಸಹಕಾರ ಪಡೆದು ಸಮಸ್ಯೆ ಗೆ ಪರಿಹಾರ ಮಾಡಿಕೊಳ್ಳಬೇಕು. ನಿಮ್ಮ ಗುರಿ ಏನಿದೆಯೋ ಅದನ್ನು ತಲುಪಲು ಪ್ರಯತ್ನ ಅಗತ್ಯ ಎಂದರು.
ಅಥೆನಾ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ದೀಪ ಪೀಟರ್ ಮಾತನಾಡಿ ನರ್ಸಿಂಗ್ ಕೋರ್ಸ್ ಹಾಗೂ ಅದರ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು.
ಕಣಚೂರು ಮೆಡಿಕಲ್ ಕಾಲೇಜು ಆಫ್ ಸೈನ್ಸ್ ಡೈರೆಕ್ಟರ್ ಅಬ್ದುಲ್ ರಹಿಮಾನ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈದ್ಯಕೀಯ ಸೇವೆಗೆ ನರ್ಸ್ ಮುಖ್ಯ ಆಗಿರುತ್ತದೆ. ರೋಗಿಗಳ ಆರೈಕೆ ಜವಾಬ್ದಾರಿ ವೈದ್ಯರ ಜೊತೆಗೆ ನರ್ಸ್ ಗೂ ಇದೆ.ಈ ಕೋರ್ಸ್ ಪಡೆಯುವವರು ತರಬೇತಿ ಮತ್ತು ಅನುಭವ ಅಗತ್ಯ ಇದೆ ಎಂದು ಹೇಳಿದರು.
ಕಾರ್ಯಕ್ರಮ ದಲ್ಲಿ ಮೆಡಿಕಲ್ ಆಫೀಸರ್ ಡಾ.ರೋಹನ್ ಮೋನೀಸ್, ಕಣಚೂರು ಹೆಲ್ತ್ ಸೈನ್ಸ್ ಸಲಹಾ ಕಮಿಟಿ ಸದಸ್ಯ ಎಂ ವೆಂಕಟೇಶ್ ಪ್ರಭು, ಅಲೈಡ್ ಹೆಲ್ತ್ ಸೈನ್ಸ್ ಪ್ರಿನ್ಸಿಪಾಲ್ ಶಮೀಮ , ಮೇಡಿಕಲ್ ಸುಪರಿಂಟೆಂಡೆಂಟ್ ಶಹನವಾಝ್ ಮಾನಿಪ್ಪಾಡಿ, ಡೀನ್ ಡಾ. ರತ್ನಾಕರ ಉಪಸ್ಥಿತರಿದ್ದರು.
ಕಣಚೂರು ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಮೋಲಿ ಸಲ್ದಾನ ಸ್ವಾಗತಿಸಿದರು.