ಪಿ.ಎ. ಕಾಲೇಜಿನಲ್ಲಿ ಒರಿಯೆಂಟೇಶನ್ ಕಾರ್ಯಕ್ರಮ

Update: 2024-08-13 15:00 GMT

ಕೊಣಾಜೆ: “ಇಂದು ನಾವು ಸಾಮಾನ್ಯ ಒಬ್ಬ ವಿದ್ಯಾರ್ಥಿಯಾಗಿ ಸೇರಿದ್ದರೂ ಮುಂದಿನ ದಿನಗಳಲ್ಲಿ ಅಸಾಮಾನ್ಯ ಸಾಧನೆ ಯೊಂದಿಗೆ ಹೊರಹೊಮ್ಮುವಂತಾಗಬೇಕು ” ಪಿ.ಎ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಪ್ರಾಂಶುಪಾಲರಾದ ಡಾ. ರಮೀಝ್ ಎಂ.ಕೆ ಹೇಳಿದರು.

ಪಿ.ಎ ಪ್ರಥಮ ದರ್ಜೆ ಕಾಲೇಜಿನ ಒರಿಯೆಂಟೇಶನ್ ಕಾರ್ಯಕ್ರಮದಲ್ಲಿ 2024ರ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು. 

ಕಾಲೇಜಿನ ಪ್ರಾಂಶುಪಾಲರಾದ ಡಾ. ಸರ್ಫ್ರಾಝ್ ಜೆ ಹಾಸಿಂ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಐ.ಎಸ್.ಡಿ.ಸಿ ಯ ಮುಖ್ಯಸ್ಥೆ ನಂದಾದೇವಿ, ಐ.ಎಸ್.ಡಿ.ಸಿ ಯ ವ್ಯವಹಾರ ವಿಭಾಗದ ಮುಖ್ಯಸ್ಥ ಶರತ್ ವೇಣುಗೋಪಲ್ ವಿದ್ಯಾರ್ಥಿಗಳಿಗೆ ಹಿತನುಡಿಗಳಾನ್ನಾಡಿದರು. ಕಾಲೇಜಿನ ಷರತ್ತು ಮತ್ತು ನಿಯಮಾವಳಿಗಳನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥೆ ದೀಪ್ತಿ ಉದ್ಯಾವರ, ಉಪನ್ಯಾಸಕಿ ಸುನಿತ ರವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪೇಸ್ ಕ್ಯಾಂಪಸ್ ಎಜಿಎಂ ಶರ್ಪುದ್ದೀನ್ ಪಿ.ಕೆ, ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ. ಸಯ್ಯಿದ್ ಅಮೀನ್ ಅಹ್ಮದ್, ಪಿ.ಎ.ಪಿ.ಟಿ ಪ್ರಾಂಶುಪಾಲರಾದ ಪ್ರೊ. ಕೆ ಪಿ ಸೂಫಿ, ಪಿ.ಎ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶು ಪಾಲರಾದ ಡಾ. ಸಲೀಮುಲ್ಲಾ ಖಾನ್, ದೈಹಿಕ ವಿಭಾಗದ ಮುಖ್ಯಸ್ಥರಾದ ಡಾ. ಇಕ್ಬಾಲ್, ದಾಖಲಾತಿ ವಿಭಾಗದ ಶಫಿನಝ್ ಸಯ್ಯಿದ್ ಇಸ್ಮಾಯಿಲ್, ಪರ್ಚೇಸ್ ಅಫಿಸರ್ ಹಾರಿಸ್ ಟಿ ಡಿ, ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥೆ ನೂರ್ ಜಹಾನ್, ಹಾಗೂ ಐ.ಕ್ಯೂ.ಎ.ಸಿ ವಿಭಾಗದ ಸಂಯೋಜಕರಾದ ವಾಣಿಶ್ರೀ ವೈ ಉಪಸ್ಥಿತರಿದ್ದರು.

ಉಪ ಪ್ರಾಂಶುಪಾಲರಾದ ಡಾ. ಹರಿಕೃಷ್ಣನ್ ಜಿ ಸ್ವಾಗತಿ, ವಿಜ್ಞಾನ ವಿಭಾಗದ ಮುಖ್ಯಸ್ಥೆ ಡೆಲ್ಸಿ ಡಿ ಸೋಜ ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ಲವೀನ ಡಿ. ಸೋಜ ಹಾಗೂ ಕುಮಾರಿ ಅನ್ಫಾ ನಿಶಾತ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News