ಪುತ್ತೂರು: ವಸತಿ ಶಾಲೆಗೆ ದ.ಕ. ಜಿಲ್ಲಾಧಿಕಾರಿ ದಿಢೀರ್ ಭೇಟಿ

Update: 2023-11-04 13:39 GMT

ಮಂಗಳೂರು : ಪುತ್ತೂರು ತಾಲೂಕಿಗೆ ಶುಕ್ರವಾರ ತೆರಳಿದ್ದ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಬಲ್ನಾಡು ಗ್ರಾಮದ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಹಾಸ್ಟೆಲ್ ಕಟ್ಟಡ ಹಾಗೂ ಅಡುಗೆ ಕೋಣೆಯನ್ನು ಪರಿಶೀಲಿಸಿದ ಅವರು ವಿದ್ಯಾರ್ಥಿಗಳ ಭೋಜನದ ಗುಣಮಟ್ಟ, ಆಹಾರ ಸಾಮಗ್ರಿ ಸಂಗ್ರಹಣೆ ಕೊಠಡಿಯನ್ನು ವೀಕ್ಷಿಸಿದರು.

ಬಳಿಕ ವಿದ್ಯಾರ್ಥಿಗಳ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ವಸತಿ ಶಾಲೆಯ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದರು. ಆಹಾರ ಮತ್ತು ಸೌಲಭ್ಯಗಳ ಗುಣಮಟ್ಟವನ್ನುಕಾಪಾಡುವಂತೆ ಸಿಬ್ಬಂದಿ ವರ್ಗಕ್ಕೆ ಜಿಲ್ಲಾಧಿಕಾರಿ ಸೂಚಿಸಿದರು.

ಬಳಿಕ ಪುತೂರು ತಾಲೂಕಿನ ನೆಕ್ಕಿಲಾಡಿ ಗ್ರಾಮದ ದರ್ಖಾಸ್ತು ಜಮೀನಿನ ಅಳತೆ ಕೆಲಸದ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭ ಅಪರ ಜಿಲ್ಲಾಧಿಕಾರಿಡಾ.ಜಿ. ಸಂತೋಷ್ ಕುಮಾರ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಮುಕುಲ್‌ ಜೈನ್, ಭೂದಾಖಲೆಗಳ ಉಪನಿರ್ದೇಕಿ ಪ್ರಸಾದಿನಿ, ತಹಶೀಲ್ದಾರ್ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News