ಪುತ್ತೂರು : ಮಾಜಿ ಶಾಸಕ ಸಂಜೀವ ಮಠಂದೂರಿಗೆ ಹಾವು ಕಡಿತ
Update: 2023-11-16 17:24 GMT
ಉಪ್ಪಿನಂಗಡಿ : ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಹಾವು ಕಡಿತಕ್ಕೊಳಗಾದ ಘಟನೆ ನ.16 ರಂದು ನಡೆದಿದೆ.
ಸಂಜೀವ ಮಠಂದೂರು ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ರಾತ್ರಿಯ ಹೊತ್ತು ತನ್ನ ಮನೆಯ ಬಳಿ ವಾಕಿಂಗ್ ಮಾಡುತ್ತಿದ್ದಾಗ ಅವರಿಗೆ ಕಡಂಬಳ (ಕಟ್ಟಮಳಕ್ಕರಿ) ಕಡಿದಿದ್ದು, ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾವಿನ ಕಡಿತ ತರಚಿದಂತ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ನಾಳೆ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ವಾಕಿಂಗ್ ಸಂದರ್ಭ ಅವರ ಜೊತೆಗಿದ್ದ ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷ ಹಮ್ಮಬ್ಬ ಶೌಕತ್ ಅಲಿ ತಿಳಿಸಿದ್ದಾರೆ.