ರಸ್ತೆ ಅಪಘಾತ: ಗಾಯಾಳು ಸ್ಕೂಟರ್ ಸವಾರ ಮೃತ್ಯು
Update: 2023-08-22 17:49 GMT
ಉಳ್ಳಾಲ: ಸ್ಕೂಟರ್ ಸ್ಕಿಡ್ ಆಗಿ ಮಗುಚಿ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸ್ಕೂಟರ್ ಸವಾರ ಮಹಮ್ಮದ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ.
ಮಹಮ್ಮದ್ ಅವರು ಸೋಮವಾರ ಮಂಜನಾಡಿಗೆ ಹೋಗಿದ್ದರು. ವಾಪಾಸ್ ಬರುವಾಗ ಕಿನ್ಯಾ ಗ್ರಾಮದ ವಾದಿತ್ವೈಬ ಸಂಸ್ಥೆಯ ಬಳಿ ತಿರುವಿನಲ್ಲಿ ಬ್ರೇಕ್ ಹಾಕಿದಾಗ ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಮುಹಮ್ಮದ್ ಗಂಭೀರ ಗಾಯಗೊಂಡಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ.