ನಾಳೆ ಉಪ್ಪಿನಂಗಡಿಯ ಜೋಗಿಬೆಟ್ಟುವಿಗೆ ʼಸಯ್ಯಿದುಲ್ ಉಲಮಾʼ ಆಗಮನ

Update: 2024-09-24 12:35 GMT

ಉಪ್ಪಿನಂಗಡಿ : ಸಮಸ್ತ ವಿದ್ಯಾಭ್ಯಾಸ ಮಂಡಳಿಯ ಅಧೀನದಲ್ಲಿರುವ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ಇದರ ವತಿಯಿಂದ ನೀಡಲ್ಪಡುವ ʼಮುಅಲ್ಲಿಂ ಮಂಝಿಲ್ʼ ಮನೆಯ ಉದ್ಘಾಟನಾ ಕಾರ್ಯಕ್ರಮವು ಸೆ. 25 (ಬುಧವಾರ) ಅಪರಾಹ್ನ ಗಂಟೆ 3.00ಕ್ಕೆ ಉಪ್ಪಿನಂಗಡಿಯ ಜೋಗಿಬೆಟ್ಟುನಲ್ಲಿ ನಡೆಯಲಿದೆ.

ಸಮಸ್ತ ಅಧ್ಯಕ್ಷರೂ, ಕರ್ನಾಟಕ, ಕೇರಳ ರಾಜ್ಯಗಳ ಹಲವಾರು ಮೊಹಲ್ಲಾದ ಸಂಯುಕ್ತ ಖಾಝಿಗಳೂ ಆದ 'ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕ್ಕೋಯ ತಂಙಳ್' ಮುಅಲ್ಲಿಂ ಮಂಝಿಲ್ ಉದ್ಘಾಟನಾ ಕಾರ್ಯವನ್ನು ನೆರೆವೇರಿಸಲಿದ್ದಾರೆ.

SKJMCC ವತಿಯಿಂದ ವರ್ಷಂ ಪ್ರತಿ ಆರ್ಥಿಕವಾಗಿ ಅತೀ ಹಿಂದುಳಿದ ಅಧ್ಯಾಪಕರನ್ನು ಗುರುತಿಸಿ ಅವರಿಗೆ ಮನೆಯನ್ನು ನಿರ್ಮಿಸಿ ಕೊಡುತ್ತಿದ್ದು, ಕಳೆದ ವರ್ಷದ ಯೋಜನೆಗೆ ಉಪ್ಪಿನಂಗಡಿ ವ್ಯಾಪ್ತಿಯ ಜೋಗಿಬೆಟ್ಟುವಿನ ಅಧ್ಯಾಪಕರೊರ್ವರು ಆಯ್ಕೆಯಾಗಿದ್ದಾರೆ. ಈ ಮನೆಯ ಉದ್ಘಾಟನಾ ಕಾರ್ಯಕ್ರಮವು ಬುಧವಾರ ಸಯ್ಯಿದುಲ್ ಉಲಮಾರಿಂದಲೇ ನೆರವೇರಲಿದೆ. ಈ ವರ್ಷ ಇದೇ ಯೋಜನೆಗೆ ಅಂಗರಕರ್ಯ ಸಮೀಪದ ಅಧ್ಯಾಪಕರೊರ್ವರು ಆಯ್ಕೆಯಾಗಿದ್ದಾರೆ. ಅಧ್ಯಾಪಕರಿಗೆ ಗೃಹ ನಿರ್ಮಾಣವಲ್ಲದೇ ಇನ್ನಿತರ ಕಲ್ಯಾಣ ಯೋಜನೆಗಳು ಸಮಸ್ತ ವಿದ್ಯಾಭ್ಯಾಸ ಮಂಡಳಿಯು ಕಲ್ಪಿಸಿದ್ದು, ಅರ್ಹ ಅಧ್ಯಾಪಕರು ಫಲಾನುಭವಿಗಳಾಗುತ್ತಿದ್ದಾರೆ.

ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಶಂಸುದ್ದೀನ್ ದಾರಿಮಿ ಪಮ್ಮಲೆ, ಕಾರ್ಯದರ್ಶಿ ಮುಹಮ್ಮದ್ ನವವಿ ಬೆಳ್ಲಾರೆ, ಕೋಶಾಧಿಕಾರಿ ಇಬ್ರಾಹಿಂ ದಾರಿಮಿ ಕಡಬ, ಹಾಗೂ ಜಿಲ್ಲಾ ಪ್ರತಿನಿಧಿಗಳು, ಜಿಲ್ಲಾ ಮದ್ರಸ ಮ್ಯಾನೇಜ್ಮೇಂಟ್ ಅಧ್ಯಕ್ಷರಾದ ಎಮ್. ಎಚ್. ಮುಹ್ಯದ್ದೀನ್ ಹಾಜಿ, ಕಾರ್ಯದರ್ಶಿ ರಫೀಕ್ ಹಾಜಿ ಕೊಡಾಜೆ, ಕೋಶಾಧಿಕಾರಿ ಅಬ್ದುಲ್ ಖಾದರ್ ಹಾಜಿ ಬೆಯಂಬಾಡಿ, ಉಪ್ಪಿನಂಗಡಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಕೆ.ಎಚ್. ಅಶ್ರಫ್ ಹನೀಫಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಅಸ್ಲಮಿ , ಕೋಶಾಧಿಕಾರಿ ಅಬ್ದುರಹ್ಮಾನ್ ಹಾಜಿ ಕೊಳ್ಳೆಜಾಲ್ ಮ್ಯಾನೇಜ್ಮೇಂಟ್ ಕಾರ್ಯದರ್ಶಿ ಎಚ್ ಯೂಸುಫ್ ಹಾಜಿ ಕೋಶದಿಕಾರಿ ಝಕರಿಯ ಹಾಜಿ, ಚೇರ್ಮೆನ್ ಝಕರಿಯ ಮುಸ್ಲಿಯಾರ್, ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ ಭಾಗವಹಿಸಲಿದ್ದಾರೆ ಎಂದು ಐಟಿ ಕೋಡಿನೇಟರ್ ಅಬ್ದುರಝಾಕ್ ದಾರಿಮಿ ಕರಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News