ಕುದ್ರೋಳಿಯಲ್ಲಿ ಮುಸ್ಲಿಂ ಐಕ್ಯತ ವೇದಿಕೆಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ

Update: 2023-08-15 17:13 GMT

ಮಂಗಳೂರು: ಕುದ್ರೋಳಿಯ ಮುಸ್ಲಿಂ ಐಕ್ಯತ ವೇದಿಕೆ ವತಿಯಿಂದ ೭೭ನೇ ಸ್ವಾತಂತ್ರೋತ್ಸವದ ಆಚರಣೆ ಸಂಭ್ರದಿಂದ ನಡೆಯಿತು.

ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಫಾತಿಮಾ ಇಸ್ಲಾಮಿಕ್ ಸೆಂಟರ್ ಜಾಮಿಯಾ ಮಸೀದಿಯ ಬಳಿ ಸಮಿತಿ ಅಧ್ಯಕ್ಷ. ಮುಹಮ್ಮದ್ ಯಾಸೀನ್ ಅಧ್ಯಕ್ಷ ತೆಯಲ್ಲಿ ನಡೆಯಿತು.

ಸಹಾಯಕ ಪೋಲಿಸ್ ಆಯುಕ್ತ ಮಹೇಶ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು. ನಡುಪಳ್ಳಿ ಜುಮಾ ಮಸೀದಿ ಖತೀಬರು ಕೆ ಎಸ್ ಮುಹಮ್ಮದ್ ರಿಯಾಝ್ ಫೈಝಿ ಮಾತಾಡಿ ಶಿಕ್ಷಣದಲ್ಲಿ ವಿಧ್ಯಾರ್ಥಿಗಳು ಮುಂದುವರಿಯಿರಿ ನಿಮ್ಮೊಂದಿಗೆ ಐಕ್ಯತ ವೇದಿಕೆ ಸಹಕಾರವಿದೆ ಎಂದರು. ಸಲಫಿ ಮಸೀದಿಯ ಶೇಖ್ ಸಾಕಿಬ್ ಸಲೀಂ ಉಮ್ರಿ ಮಾತಾಡಿದರು.

ವೇದಿಕೆಯಲ್ಲಿ ಕಾರ್ಪೋರೇಟರ್ ಶಂಸುದ್ದೀನ್ ಎಚ್ , ಜಾಮಿಅ ಮಸೀದಿ ಕೋಶಾಧಿಕಾರಿ ಮಕ್ಬೂಲ್ ಸಂಚಾಲಕ ಎಂ ಅಝೀಝ್ ಕುದ್ರೋಳಿ, ಉದ್ಯಮಿ ಯು ಬಿ ಇಬ್ರಾಹೀಂ, ಉಪಾಧ್ಯಕ್ಷ ಎಸ್.ಎ. ಖಲೀಲ್, ಸಹ ಕಾರ್ಯದರ್ಶಿ ಎನ್ ಕೆ ಅಬೂಬಕರ್, ಸಹ ಕಾರ್ಯದರ್ಶಿ ಮುಝೈರ್ ಕುದ್ರೋಳಿ , ಸಮಿತಿ ಸದಸ್ಯರುಗಳಾದ ಮಾಜಿ ಮೇಯರ್ ಕೆ ಅಶ್ರಫ್ , ಮುಸ್ತಾಕ್ ಕುದ್ರೋಳಿ ಅಬ್ದುಲ್ ಲತೀಫ್ ಕ್ರಿಸ್ಟಲ್, ಅಬ್ದುಲ್ ವಹಾಬ್ , ಬಿ ಎ ಇಸ್ಮಾಯಿಲ್ ಉಪಸ್ಥಿತರಿದ್ದರು.

ಸಫ್ವಾನ್ ಕಿರಾಅತ್ ನೊಂದಿಗೆ ಚಾಲನೆಯಾದ ಕಾರ್ಯಕ್ರಮ ದಲ್ಲಿ ಪ್ರಧಾನ ಕಾರ್ಯದರ್ಶಿ ಹಾಜಿ ಬಿ ಅಬೂಬಕ್ಕರ್ ಸ್ವಾಗತಿಸಿ ಅಶ್ರಫ್ ಕಿನಾರ ಮಂಗಳೂರು ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ಮಕ್ಬೂಲ್ ಅಹ್ಮದ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News