ಸುಬ್ರಹ್ಮಣ್ಯ | ಕಾಡಾನೆ ದಾಳಿ: ಅಯ್ಯಪ್ಪ ವೃತಧಾರಿಗೆ ಗಂಭೀರ ಗಾಯ
Update: 2024-12-17 07:41 GMT
ಸುಬ್ರಹ್ಮಣ್ಯ: ಕಾಡಾನೆ ದಾಳಿಯಿಂದ ಅಯ್ಯಪ್ಪ ವೃತಧಾರಿ ಯುವಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಕಲ್ಮಕಾರು ಗ್ರಾಮದ ಚರಿತ್ ಎಂಬವರು ಆನೆ ದಾಳಿಗೆ ಒಳಗಾದ ಯುವಕ. ಚರಿತ್ ಅಯ್ಯಪ್ಪ ಮಾಲೆ ಧರಿಸಿರುವುದರಿಂದ ವೃತಧಾರಿಗಳು ತಂಗುವ ಟೆಂಟ್ ನಲ್ಲಿ ವಾಸವಿದ್ದರು. ಇಂದು ಮುಂಜಾನೆ ಟೆಂಟ್ ಪಕ್ಕದಲ್ಲಿರುವ ತೋಡಿನಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.