ಕಣಚೂರು ಆಸ್ಪತ್ರೆಯಲ್ಲಿ ಇಬ್ಬರು ಮಹಿಳೆಯರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

Update: 2023-10-03 12:29 GMT

ಕೊಣಾಜೆ: ದವಡೆ ಹಾಗೂ ಥೈರಾಯಿಡ್ ಕಾಯಿಲೆಯ ಕ್ಷಿಷ್ಟಕರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದ ಇಬ್ಬರು ಮಹಿಳೆಯರಿಗೆ ಕಣಚೂರು ಆಸ್ಪತ್ರೆಯ ವೈದ್ಯರ ತಂಡವು ಅಪರೂಪದ ಶಸ್ತ್ರಚಿಕಿತ್ಸೆಯನ್ನು ನಡೆಸುವುದರ ಮೂಲಕ ಯಶಸ್ವಿಯಾಗಿದೆ ಎಂದು ಕಣಚೂರು ಮೆಡಿಕಲ್ ಕಾಲೇಜು ಅಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾದ‌ ಅಬ್ದುಲ್ ರಹಿಮಾನ್ ಅವರು ಹೇಳಿದರು.

ಅವರು ಮಂಗಳವಾರ ಕಣಚೂರು‌ ಮೆಡಿಕಲ್ ಆಸ್ಪತ್ರೆ ಸೆಮಿನಾರ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಕ್ರೇನಿಯೊಫೇಶಿಯಲ್ ವಿಭಾಗದ ಮುಖ್ಯಸ್ಥರಾದ ಡಾ. ಮುಸ್ತಫಾ ಕೆ ಅವರು ಈ ಬಗ್ಗೆ ಮಾಹಿತಿ ನೀಡಿ, ಹರಿಯಾಣ ರಾಜ್ಯದ ಸೋನಿಪತ್‌ ಜಿಲ್ಲೆಯ 22 ವರ್ಷದ ನಜ್ರೀನ್ ಎಂಬ ಮಹಿಳೆ, ತನ್ನ ಮುಖದ ದವಡೆಯ ಎರಡೂ ಬದಿಗಳಲ್ಲಿ ಬಾಯಿ ಸಂಪೂರ್ಣ ತೆರೆಯಲು ಹಾಗೂ ಆಹಾರ ತಿನ್ನಲು ಸಾಧ್ಯವಾಗದೆ ಇರುವಂತಹ ದವಡೆಯ ಸಮಸ್ಯೆಯನ್ನು ಎದುರಿಸುತ್ತಿ ದ್ದರು. ಈ ಹಿಂದೆ 10,11 ಮತ್ತು 17 ನೇ ವಯಸ್ಸಿನಲ್ಲಿ ಬಾಯಿ ತೆರೆಯುವಿಕೆಯನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಚಿಕಿತ್ಸೆಯು ಯಶಸ್ವಿಯಾಗಿರಲಿಲ್ಲ. ನಂತರ ರೋಗಿಯು ಚಿಕಿತ್ಸೆಗಾಗಿ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯ ಕ್ರೇನಿಯೋಫೇಶಿಯಲ್ ಅನೋಮಲೀಸ್ ವಿಭಾಗವನ್ನು ಸಂಪರ್ಕಿಸಿದ್ದರು. ವಿಭಾಗದ ಮುಖ್ಯಸ್ಥರಾದ ಡಾ. ಮುಸ್ತಫಾ ಕೆ ಇವರನ್ನೊಳಗೊಂಡ ಶಸ್ತ್ರ ಚಿಕಿತ್ಸಾ ವಿಭಾಗವು ಕಸ್ಟಮ್- ನಿರ್ಮಿತ ಕೃತಕ ಅಂಗದ ಮೂಲಕ ಜಂಟಿ ಪುನ ರ್ನಿರ್ಮಾಣ ಮತ್ತು ಮುಖದ ವಿರೂಪತೆಯ ತಿದ್ದುಪಡಿಯ ಶಸ್ತ್ರ ಚಿಕಿತ್ಸೆಯನ್ನು ಸಂಪೂರ್ಣ ಯಶಸ್ವಿಯಾಗಿ ಮಾಡಿದ್ದು ಅಂತಿಮವಾಗಿ ರೋಗಿಯು ಪ್ರಸ್ತುತ ಸಾಮಾನ್ಯ ವ್ಯಕ್ತಿಯಂತೆ ಬಾಯಿಯನ್ನು ಸಂಪೂರ್ಣ ತೆರೆಯಲು ಮತ್ತು ಆಹಾರವನ್ನು ತಿನ್ನಲು ಈ ಶಸ್ತ್ರ ಚಿಕಿತ್ಸೆಯು ಸಹಕಾರಿಯಾಗಿದೆ‌ ಎಂದರು.

ಕ್ರೇನಿಯೋಫೇಶಿಯಲ್ ಅನೋಮಲೀಸ್‌ ವಿಭಾಗದ ಮುಖ್ಯಸ್ಥರಾದ ಡಾ. ಮುಸ್ತಫಾ ಕೆ ಮತ್ತು ಡಾ. ಅಭಯ್ ಕಾಮತ್ ಶಸ್ತ್ರಚಿಕಿತ್ಸಕರ ತಂಡದಲ್ಲಿದ್ದರು.

47 ವರ್ಷ ವಯಸ್ಸಿನ ಮಹಿಳೆ ಒಬ್ಬರು ಹದಿನಾರು ವರ್ಷಗಳ ಹಿಂದೆ ಎಡ ಭಾಗದ ಥೈರಾಯಿಡ್ ಶಸ್ತ್ರ ಚಿಕಿತ್ಸೆ‌ ಮಾಡಿಸಿ ಕೊಂಡಿದ್ದ ಅವರು ಬಳಿಕ ತೀವ್ರತರದ ಉಸಿರಾಟದ ತೊಂದರೆಗೆ ಒಳಗಾಗಿ ತುಂಬಾ ವೈದ್ಯರನ್ನು ಸಂಪರ್ಕಿಸಿದ್ದರು. ರೋಗಿಯು ತಲೆಯ ಮೇಲಿನ ಸಣ್ಣ ಊತದ ತೊಂದರೆಗೆ ಕಣಚೂರು ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗವನ್ನು ಸಂಪರ್ಕಿಸಿ ದರು ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯರು ಮತ್ತೊಮ್ಮೆ ಎಲ್ಲಾ ತರಹದ ಪರೀಕ್ಷೆಗೆ ಒಳಪಡಿಸಿ ಮತ್ತು 12 ಮತ್ತು 17cm ಗಾತ್ರದ ಥೈರಾಯ್ಡ್ ಗಡ್ಡೆಯನ್ನು ಪತ್ತೆ ಹಚ್ಚಿದರು. ಥೈರಾಯ್ಡ್ ಗಡ್ಡೆ ಆರಂಭವಾಗಿ ಎದೆಯ ಹಿಂಭಾಗಕ್ಕೆ ಹರಡಿ ಮತ್ತು ಶ್ವಾಸ ನಾಳಗಳಗೆ ಒತ್ತಡವನ್ನು ಉಂಟು ಮಾಡುತ್ತಿತ್ತು. ಕಣಚೂರು ಆಸ್ಪತ್ರೆಯ ಶಸ್ತ್ರ ವಿಭಾಗದ ವೈದ್ಯರು ರೋಗಿಯನ್ನು ಸಂಕೀರ್ಣ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಕುತ್ತಿಗೆ ಮತ್ತು ತೊರಾಕ್ಟಮಿ ವಿಧಾನದ ಮೂಲಕ ಸಂಪೂರ್ಣ ಗಡ್ಡೆಯನ್ನು ತೆಗೆದರು. ರೋಗಿಯು ಯಾವುದೇ ಉಸಿರಾಟದ ತೊಂದರೆ ಇಲ್ಲದೆ ಅಂತಿಮ ಹಂತದ ಚೇತರಿಕೆಯಲ್ಲಿ ಇದ್ದಾರೆ.

ವೈದ್ಯರಾದ ಡಾ. ಕಿರಣ್ ಕುಮಾರ್, ಜನರಲ್ ಶಸ್ತ್ರಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕರು ತಂಡದಿಂದ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಡಾ. ಚೈತ್ರ ಕೆ ಭಟ್ ಎದೆಗೂಡಿನ ಶಸ್ತ್ರ ಚಿಕಿತ್ಸಾ ವಿಭಾಗ ,ಡಾ.ರಶ್ಮಿ ಡಿಸೋಜಾ ಶಸ್ತ್ರಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕರು, ಡಾ. ಶಾಮಿಯಲ್ ಕುಂದರ್ ಸಹಾಯಕ ಪ್ರಾಧ್ಯಾಪಕರು ಅರಿವಳಿಕೆ ವಿಭಾಗ ಇವರು ಯಶಸ್ವಿ ಶಸ್ತ್ರಚಿಕಿತ್ಸೆಯ ತಂಡದಲ್ಲಿದ್ದರು.

ಇದೊಂದು ಭಾರತದಲ್ಲಿ ವರದಿಯಾದ ಅತಿ ದೊಡ್ಡ ಪೋಷ್ಟಿರಿಯಲ್ ಮೀಡಿಯಾ ಸ್ಟೈನಲ್ ಕ್ರಾಸ್ ಓವರ್ ಥೈರಾಯ್ಡ್ ರೋಗವಾಗಿದೆ ಎಂದು ವೈದ್ಯರಾದ‌ ಡಾ.ಕಿರಣ್ ಕುಮಾರ್ ಹಾಗೂ ಡಾ.ಚೈತ್ರಾ ಭಟ್ ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವೈಧ್ಯಕೀಯ ಅಧೀಕ್ಷಕರಾದ ಡಾ. ಹರೀಶ್ ಶೆಟ್ಟಿ , ಡೀನ್ ಡಾ. ರತ್ನಾಕರ್ ಯು. ಪಿ, ಕಣಚೂರು ಸಲಹಾ ಸಮಿತಿ ಸದಸ್ಯರಾದ ಡಾ. ಎಂ ವೆಂಕಟರಾಯ ಪ್ರಭು, ಕಣಚೂರು ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ವೈದ್ಯರಾದ ಡಾ. ಮುಸ್ತಫಾ.ಕೆ, ಸಹಾಯಕ‌ ಪ್ರಾಧ್ಯಾಪಕ ಡಾ. ಕಿರಣ್ ಕುಮಾರ್, ಎದೆ ಗೂಡಿನ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಚೈತ್ರ ಕೆ ಭಟ್, ಮುಖ್ಯ ಆಡಳಿತಾಧಿಕಾರಿ ಡಾ. ರೋಹನ್ ಮೋನಿಸ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News