ದೇರಳಕಟ್ಟೆ ಶಾಲೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ

Update: 2024-11-23 09:12 GMT

ದೇರಳಕಟ್ಟೆ: ಶಿಕ್ಷಣ ಕ್ಕೆ ಒತ್ತು ಕೊಡುವುದು ನಮ್ಮ ಜವಾಬ್ದಾರಿ, ವಿದ್ಯಾರ್ಥಿಗಳು ಮತ್ತು ಶಿಕ್ಷಣ ಇವೆರಡು ಬೆಳೆಸಿದರೆ ಇದಕ್ಕೆ ಬೇಕಾದ ಮೂಲಭೂತ ಸೌಕರ್ಯ, ಕೊಠಡಿ ‌ಹಾಗೂ ಶಿಕ್ಷಕರ ವ್ಯವಸ್ಥೆ ಸರ್ಕಾರದ ವತಿಯಿಂದ ಮಾಡಿಕೊಡುತ್ತೇನೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.

ಅವರು ದೇರಳಕಟ್ಟೆ ಸುಭಾಷ್ ಚಂದ್ರ ಬೋಸ್ ಜಿ.ಪ. ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣ ಕ್ಕೆ ಶಿಲಾನ್ಯಾಸ, ಪದವಿ ಪೂರ್ವ ಕಾಲೇಜು ಕೊಠಡಿ ಉದ್ಘಾಟನೆ ಹಾಗೂ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿದ ಸುಭಾಷ್ ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕಿ Foundation stone laid for new building of Deralakatte schoolನಯನ ಕುಮಾರಿ ಅವರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮ ದಲ್ಲಿ ಮಾತನಾಡಿದರು.

ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದಬೇಕು.ಇದು ಸ್ಥಳೀಯರಿಂದ ಮಾತ್ರ ಸಾಧ್ಯ. ಶಿಕ್ಷಕರು ಬೇಕು ಎಂದು ಬೇಡಿಕೆ ಇಟ್ಟರೆ ಸಾಕಾಗುವುದಿಲ್ಲ.ವಿದ್ಯಾರ್ಥಿಗಳಿಗೆ ಅನುಗುಣವಾಗಿ ಶಿಕ್ಷಕರ ನೇಮಕ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಭಡ್ತಿ ಹೊಂದಿದ ನಯನ ಕುಮಾರಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು

ಈ ಕಾರ್ಯಕ್ರಮದಲ್ಲಿ ದೇರಳಕಟ್ಟೆ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮುಸ್ತಫಾ, ಬೆಳ್ಮ ಗ್ರಾ. ಪಂ. ಮಾಜಿ ಅಧ್ಯಕ್ಷ ಯೂಸುಫ್ ಬಾವ, ಸಿ.ಎಂ.ಫಾರೂಕ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್ ದೇರಳಕಟ್ಟೆ ಬೆಳ್ಮ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹೇಮಾವತಿ, ಸದಸ್ಯರಾದ ಸತ್ತಾರ್ ಸಿ.ಎಂ., ರವೂಫ್ ಸಿ.ಎಂ.,ಇಕ್ಬಾಲ್ ಎಚ್.ಆರ್.ಇಬ್ರಾಹಿಂ, ಪ್ರೌಢ ಶಾಲೆ ಎಸ್ ಡಿಎಂಸಿ ಅಧ್ಯಕ್ಷ ಇಸ್ಮಾಯಿಲ್ ಪನೀರ್ , ಹನೀಫ್ ಬೆಳ್ಮ ಮತ್ತಿತರರು ಉಪಸ್ಥಿತರಿದ್ದರು. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಮೇಬಲ್ ಗ್ರೆಟಾ ವೇಗಸ್ ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News