ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ : ಡಾ. ರಾಮಚಂದ್ರ ಜೋಶಿ
ಕಾರ್ಕಳ : ರಕ್ತದಾನದ ಬಗ್ಗೆ ಜನರಲ್ಲಿ ಇನ್ನು ಹೆಚ್ಚಿನ ಜಾಗೃತಿ ಮೂಡುವಂತಾಗಬೇಕು ಈ ನಿಟ್ಟಿನಲ್ಲಿ ವಿವಿಧ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಕಾರ್ಕಳದ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ ಘಟಕ ಇದರ ಸಭಾಪತಿ ಡಾ. ಕೆ ರಾಮಚಂದ್ರ ಜೋಶಿ ಹೇಳಿದರು.
ರೋಟರಿ ಕ್ಲಬ್ ಕಾರ್ಕಳ, ಬಸ್ ಏಜೆಂಟರ ಬಳಗ ಕಾರ್ಕಳ, ರೋಟರ್ಯಾಕ್ಟ್ ಕ್ಲಬ್ ಕಾರ್ಕಳ, ಯುವ ವಾಹಿನಿ(ರಿ) ಕಾರ್ಕಳ ಘಟಕ, ನಿಟ್ಟೆ ಗಾಜ್ರಿಯಾ ಆಸ್ಪತ್ರೆ ಕಾರ್ಕಳ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾರ್ಕಳ ವಲಯ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ ಘಟಕ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಸ್ ಸ್ಟ್ಯಾಂಡ್ ಕಾರ್ಕಳ, ಲಯನ್ಸ್ ಕ್ಲಬ್ ಹಿರಿಯಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ವಿಭಾಗ ಅಜ್ಜರಕಾಡು ಉಡುಪಿ ಇವರ ಸಹಯೋಗದೊಂದಿಗೆ ಕಾರ್ಕಳ ಬಸ್ ಸ್ಟ್ಯಾಂಡಿನಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷರಾದ ಜಾನ್ ಡಿ ಸಿಲ್ವ ಮಾತನಾಡುತ್ತಾ ರಕ್ತದಾನ ಮಾಡುವ ಮನೋಭಾವನೆ ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆ. ರಕ್ತದಾನದಂತೆಯೇ ಮರಣದ ಬಳಿಕ ಅಮೂಲ್ಯವಾದ ದೇಹದ ಅಂಗಾಂಗ ಗಳನ್ನು ಅವಶ್ಯಕತೆ ಇರುವವರಿಗೆ ದಾನ ಮಾಡುವ ಮೂಲಕ ಅವರ ಬಾಳಲ್ಲಿ ಬೆಳಕನ್ನು ತೋರುವಂತಾ ಗಬೇಕು ಎಂದರು.
ಅಶೋಕ್ ಮಂಟ್ರಾಡಿ ಅಧ್ಯಕ್ಷರು ಬಸ್ ಏಜೆಂಟರ ಬಳಗ ಕಾರ್ಕಳ,ಡಾ. ದೀಕ್ಷಾ ಯು. ವೈದ್ಯಾಧಿಕಾರಿಗಳು ಜಿಲ್ಲಾ ಆಸ್ಪತ್ರೆ ಅಜ್ಜರ ಕಾಡು ಉಡುಪಿ,ಪ್ರಶಾಂತ ಆಚಾರ್ಯ ಮಾಜಿ ಅಧ್ಯಕ್ಷರು ರೋಟರ್ಯಾಕ್ಟ್ ಕ್ಲಬ್ ಕಾರ್ಕಳ, ಅರುಣ್ ಮಾಂಜ ಅಧ್ಯ ಕ್ಷರು ಯುವ ವಾಹಿನಿ ಕಾರ್ಕಳ, ಶುಭಕರ ಅಂಚನ್ ಸಾರ್ವಜನಿಕ ಸಂಪರ್ಕಾಧಿಕಾರಿ ನಿಟ್ಟೆಗಾಜ್ರಿಯ ಆಸ್ಪತ್ರೆ ಕಾರ್ಕಳ, ಸುಶೀಲ್ ಕುಮಾರ್ ಅಧ್ಯಕ್ಷರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾರ್ಕಳ, ರವೀಂದ್ರನಾಥ್ ಹೆಗಡೆ ವಲಯ ಸಭಾಪತಿ ಲಯನ್ಸ್ ಕ್ಲಬ್ ಹಿರಿಯಡ್ಕ,ಶುಭದ ರಾವ್ ಸ್ಥಾಪಕ ಅಧ್ಯಕ್ಷರು ಮತ್ತು ಸುರೇಶ್ ದೇವಾಡಿಗ ಅಧ್ಯಕ್ಷರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಸ್ ಸ್ಟ್ಯಾಂಡ್ ಕಾರ್ಕಳ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿ ದರು. ಶಿಬಿರದಲ್ಲಿ ಒಟ್ಟು 63 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಇಕ್ಬಾಲ್ ಅಹಮದ್ ಸ್ವಾಗತಿಸಿದರು. ವಸಂತ್ ಎಂ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.