ಪಡಿತರ ಚೀಟಿಯಿಂದ ಮೃತರ ಹೆಸರನ್ನು ತೆಗೆಯಲು ದ.ಕ. ಜಿಲ್ಲಾಧಿಕಾರಿ ಸೂಚನೆ

Update: 2023-07-28 14:28 GMT

ಫೈಲ್‌ ಫೋಟೊ

ಮಂಗಳೂರು, ಜು.28: ದ.ಕ.ಜಿಲ್ಲೆಯಲ್ಲಿನ ಕೆಲವೊಂದು ಕುಟುಂಬಗಳ ಸದಸ್ಯರು ಮೃತರಾಗಿದ್ದರೂ ಕೂಡ ಅವರ ಹೆಸರು ಪಡಿತರ ಚೀಟಿಯಲ್ಲಿ ಇನ್ನೂ ತೆಗೆದು ಹಾಕಿಲ್ಲ. ಈ ರೀತಿಯ 13,133 ಫಲಾನುಭವಿಗಳ ಹೆಸರು ಪಡಿತರ ಚೀಟಿಯಲ್ಲಿ ಅಕ್ರಮವಾಗಿ ಉಳಿಸಿರುವುದು ಪತ್ತೆಯಾಗಿದೆ.

ಅಂತಹ ಪಡಿತರ ಚೀಟಿದಾರರು ಮೃತಪಟ್ಟವರ ದಾಖಲಾತಿಯನ್ನು ತಾಲೂಕು ಕಚೇರಿಗೆ ಸಲ್ಲಿಸಿ ಪಡಿತರ ಚೀಟಿಯಿಂದ ಮೃತಪಟ್ಟವರ ಹೆಸರನ್ನು ತೆಗೆಸಬೇಕು. ಇಲ್ಲದಿದ್ದರೆ ಅಂತಹವರನ್ನು ನಿಯಾಮಾನುಸಾರ ಅನರ್ಹಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಯ ಕಚೇರಿ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News