ಉಜಿರೆ: ಡಿವೈಡರ್ ಗೆ ಬೈಕ್ ಢಿಕ್ಕಿ; ವಿದ್ಯಾರ್ಥಿ ಮೃತ್ಯು

Update: 2023-11-24 10:23 IST
ಉಜಿರೆ: ಡಿವೈಡರ್ ಗೆ ಬೈಕ್ ಢಿಕ್ಕಿ; ವಿದ್ಯಾರ್ಥಿ ಮೃತ್ಯು
  • whatsapp icon

ಬೆಳ್ತಂಗಡಿ: ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಉಜಿರೆಯಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಕಲ್ಮಂಜ ಗ್ರಾಮದ ದೀಕ್ಷಿತ್(20) ಎಂದು ಗುರುತಿಸಲಾಗಿದೆ.

ಉಜಿರೆಯ ಖಾಸಗಿ ಕಾಲೇಜಿನ ಮೆಕ್ಯಾನಿಕಲ್ ಕೋರ್ಸ್ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದ ಈತ ಗುರುವಾರ ಮಧ್ಯಾಹ್ನ ಊಟ ಮಾಡಿ ಕಾಲೇಜಿಗೆ ಮರಳುತ್ತಿರುವಾಗ ಬೈಕ್ ನ ಸ್ಟ್ಯಾಂಡ್ ತೆಗೆಯದೆ ಚಲಾಯಿಸಿಕೊಂಡು ಬಂದ ಕಾರಣ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಘಟನೆಯಲ್ಲಿ ತಲೆಗೆ ಗಂಭೀರ ಗಾಯಗಳಾದ್ದರಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂತರ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News