ವಿಟ್ಲ: ರಸ್ತೆಯಲ್ಲೇ ಉರುಳಿಬಿದ್ದ ಕೋಳಿ ಸಾಗಾಟದ ಲಾರಿ

Update: 2023-12-01 08:36 GMT

ವಿಟ್ಲ, ಡಿ.1: ಕೋಳಿ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಉರುಳಿಬಿದ್ದ ಘಟನೆ ವಿಟ್ಲ-ಸಾಲೆತ್ತೂರು ರಸ್ತೆಯ ರಾಧಾಕಟ್ಟೆ ಎಂಬಲ್ಲಿ ಇಂದು ನಡೆದಿದೆ.

ವಿಟ್ಲ ಕಡೆಯಿಂದ ಸಾಲೆತ್ತೂರಿನತ್ತ ತೆರಳುತ್ತಿದ್ದ ಕೋಳಿ ಸಾಗಾಟದ ಈ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡವಾಗಿ ಉರುಳಿಬಿದ್ದಿದೆ.

ಘಟನೆಯಲ್ಲಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.

ರಸ್ತೆಗೆ ಉರುಳಿ ಬಿದ್ದಿದ್ದ ಕೋಳಿಗಳಿದ್ದ ಬಾಕ್ಸ್ ಗಳನ್ನು ಬಳಿಕ ಬೇರೆ ವಾಹನದಲ್ಲಿ ತುಂಬಿಸಿ ಕೊಂಡೊಯ್ಯಲಾಯಿತು.

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News