ವಿಟ್ಲ: ಗುಡುಗು ಸಹಿತ ಭಾರೀ ಮಳೆ; ಹಲವು ಮನೆಗಳಿಗೆ ಹಾನಿ

Update: 2024-10-07 08:17 GMT

ವಿಟ್ಲ: ರವಿವಾರ ಸಂಜೆ ಗುಡುಗು- ಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಕೇಪುವಿನಲ್ಲಿ ಮನೆಗೆ ಸಿಡಿಲು ಬಡಿದು ಹಾಗೂ ನರಿಕೊಂಬುವಿನಲ್ಲಿ ಮನೆಯ ಮೇಲೆ ತೆಂಗಿನಮರ ಬಿದ್ದು ಹಾನಿಯಾಗಿದೆ.

ಕೇಪು ಗ್ರಾಮದ ಕೋಡಂದೂರಿನಲ್ಲಿ ಜಯರಾಮ ನಾಯ್ಕ ಅವರ ಮನೆಗೆ ಸಿಡಿಲು ಬಡಿದು ಗೋಡೆ ಬಿರುಕು ಬಿಟ್ಟಿದ್ದು, ವಿದ್ಯುತ್ ಪರಿಕರಗಳಿಗೆ ಹಾನಿಯಾಗಿದೆ.

ಅಳಿಕೆ ಗ್ರಾಮದ ಅರುಂಬು ನಾರಾಯಣ ಮೂಲ್ಯ ಅವರ ಮನೆಗೆ ಸಿಡಿಲು ಬಡಿದು ಗೋಡೆಗೆ ಹಾನಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News