ಜುಲೈ 6ರಂದು ಯೆನ್ ಸೆಲೆಕ್ಟ್ ಮೆಗಾ ಜಾಬ್ ಫೇರ್

Update: 2024-07-04 09:56 GMT

ಮಂಗಳೂರು, ಜು.4: ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ, ಯೆನೆಪೋಯ ಕಲೆ, ವಾಣಿಜ್ಯಘಿ, ವಿಜ್ಞಾನ ಮತ್ತು ನಿರ್ವಹಣಾ ಮಹಾವಿದ್ಯಾಲಯ ಹಾಗೂ ಬೆಂಗಳೂರಿನ ಸಿಯೋನ್ ಫೌಂಡೇಶನ್ ಸಹಯೋಗದಲ್ಲಿ ಜು.6ರಂದು ನಗರದ ಕೂಳೂರಿನಲ್ಲಿರುವ ಯೆನೆಪೋಯ ಕ್ಯಾಂಪಸ್‌ನಲ್ಲಿ ಬೆಳಗ್ಗೆ 10ರಿಂದ 4 ರವರೆಗೆ ಯೆನ್ ಸೆಲೆಕ್ಟ್ ಮೆಗಾ ಜಾಬ್ ಫೇರ್- 2024 ನಡೆಯಲಿದೆ ಎಂದು ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಡಾ. ಆರ್.ಜಿ. ಡಿಸೋಜ ಹೇಳಿದರು.

ಅವರು ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉದ್ಯೋಗ ಮೇಳದಲ್ಲಿ 60ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದೆ. ಈಗಾಗಲೇ 950 ಮಂದಿ ನೋಂದಣಿ ಮಾಡಿಕೊಂಡಿದ್ದುಘಿ, ಮೇಳದ ದಿನ ಕೂಡ ನೋಂದಣಿಗೆ ಅವಕಾಶವಿದೆ. ಐಟಿಐಯಿಂದ ಹಿಡಿದು ಸ್ನಾತಕೋತ್ತರ ಪದವಿಯ ವರೆಗೂ ವಿದ್ಯಾರ್ಥಿಗಳು ಈ ಮೇಳದಲ್ಲಿ ಭಾಗವಹಿಸಲಿದ್ದಾರೆ. ಐಟಿ, ಐಟಿಎಸ್, ಬ್ಯಾಕಿಂಗ್, ಹಣಕಾಸು ಮತ್ತು ಚಿಲ್ಲರೆ ವ್ಯಾಪಾರ, ಆತಿಥ್ಯ, ಆರೋಗ್ಯ ರಕ್ಷಣೆ ಮತ್ತು ಇತರ ವೃತ್ತಿಪರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಉದ್ಯೋಗ ಮೇಳದಲ್ಲಿ ಅವಕಾಶವಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಯೆನೆಪೋಯ ಸಂಸ್ಥೆಯ ರಾಜ್‌ಕಿರಣ್ ಶೆಟ್ಟಿ, ಪವಿತ್ರ ಶೆಟ್ಟಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News