ಮೋದಿ ವಿರುದ್ಧ ಆನ್ಲೈನ್ ಪೋಸ್ಟ್: 10 ವರ್ಷಗಳ ಬಳಿಕ ವ್ಯಕ್ತಿ ಖುಲಾಸೆ

Update: 2024-10-13 04:53 GMT

PC | freepik.com

ಪಣಜಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ 2014ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಎಂಜಿನಿಯರ್ ದೇವು ಚೋಡನ್ಕರ್ ಅವರ ವಿರುದ್ಧದ ಆರೋಪವನ್ನು ಪಣಜಿ ನ್ಯಾಯಾಲಯ 10 ವರ್ಷಗಳ ಬಳಿಕ ವಜಾಗೊಳಿಸಿದೆ.

ಅಭಿಯೋಜಕರು ಚೋಡನ್ಕರ್ ವಿರುದ್ಧದ ಆರೋಪವನ್ನು ಸಾಬೀತುಪಡಿಸಲು ವಿಫಲರಾದ ಹಿನ್ನೆಲೆಯಲ್ಲಿ "ಸಂಶಯದ ಪ್ರಯೋಜನ"ವನ್ನು ಆರೋಪಿಗೆ ನೀಡಬೇಕಾಗುತ್ತದೆ. ಜತೆಗೆ ದೂರುದಾರರಾದ ಅತುಲ್ ಪೈ ಕಾನೆ ಅವರು ನೀಡಿದ ಸಾಕ್ಷ್ಯ ಕೂಡಾ ಆರೋಪವನ್ನು ಸಾಬೀತುಪಡಿಸಿಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಉದ್ಯಮಿ ಹಾಗೂ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ನ ಮಾಜಿ ಅಧ್ಯಕ್ಷರೂ ಆಗಿರುವ ಕಾನೆ, ಈ ಪ್ರಕರಣವನ್ನು ಸೈಬರ್ ಪೊಲೀಸರಲ್ಲಿ ದಾಖಲಿಸಿದ್ದು, ವಿಚಾರಣೆ ವೇಳೆ ಪ್ರಕರಣ ಮುಂದುವರಿಸುವ ಇಚ್ಛೆ ತಮಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.

"ಅತುಲ್ ಪೈ ಕಾನೆ ಆರೋಪಿ ವಿರುದ್ದ ದೂರು ನೀಡಿದ್ದರು. ಆದರೆ ಸಾಕ್ಷ್ಯ ನುಡಿಯುವ ವೇಳೆ, ಈ ಪ್ರಕರಣವನ್ನು ಮುಂದುವರಿಸುವ ಇಚ್ಛೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೇ ಸ್ವ-ಇಚ್ಛೆಯಿಂದ ಈ ಅಭಿಪ್ರಾಯಕ್ಕೆ ಬಂದಿದ್ದರು. ಈ ಸಾಕ್ಷಿಯನ್ನು ದಾಖಲಿಸಿಕೊಂಡು, ಸಂಶಯದ ಲಾಭ ಆರೋಪಿಗೆ ಲಭಿಸಬೇಕು ಎನ್ನುವುದು ನನ್ನ ಭಾವನೆ. ಅಭಿಯೋಜಕರು ಕೂಡಾ ಆರೋಪಿ ವಿರುದ್ಧದ ಆರೋಪಗಳನ್ನು ಸಾಬೀತು ಮಾಡುವಲ್ಲಿ ವಿಫಲರಾಗಿದ್ದಾರೆ" ಎಂದು ಪ್ರಥಮ ದರ್ಜೆ ಜ್ಯುಡೀಷಿಯಲ್ ಮ್ಯಾಜಿಸ್ಟ್ರೇಟ್ ಅಂಕಿತಾ ನಾಗವೇಣ್ಕರ್ ಸ್ಪಷ್ಟಪಡಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News