140 ಕಿ.ಮೀ. ವೇಗದಲ್ಲಿ ಕಾರು ಚಲಾಯಿಸಿ, ಬೈಕ್ ಸವಾರನಿಗೆ ಢಿಕ್ಕಿ ಹೊಡೆದು ಪರಾರಿಯಾದ ರಜತ್ ದಲಾಲ್

Update: 2024-08-30 17:30 IST
140 ಕಿ.ಮೀ. ವೇಗದಲ್ಲಿ ಕಾರು ಚಲಾಯಿಸಿ, ಬೈಕ್ ಸವಾರನಿಗೆ ಢಿಕ್ಕಿ ಹೊಡೆದು ಪರಾರಿಯಾದ ರಜತ್ ದಲಾಲ್

ರಜತ್ ದಲಾಲ್ | PC : X 

  • whatsapp icon

ಹೊಸದಿಲ್ಲಿ : ಫಿಟ್‌ನೆಸ್ ಇನ್ಫ್ಲುಯೆನ್ಸರ್ ರಜತ್ ದಲಾಲ್ 140 ಕಿ.ಮೀ ವೇಗದಲ್ಲಿ ಕಾರು ಚಲಾಯಿಸಿ, ಬೈಕ್ ಸವಾರನಿಗೆ ಢಿಕ್ಕಿ ಹೊಡೆದು ನಿಲ್ಲಿಸದೇ ಪರಾರಿಯಾದ ಘಟನೆ ಫರಿದಾಬಾದ್‌ನಲ್ಲಿ ವರದಿಯಾಗಿದೆ.

ಘಟನೆಯು ಫರಿದಾಬಾದ್‌ನ ಎನ್‌ಎಚ್‌ಪಿಸಿ ಮೆಟ್ರೋ ನಿಲ್ದಾಣದ ಬಳಿಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವೇಗವಾಗಿ ಕಾರು ಚಲಾಯಿಸಿದ ರಜತ್ ದಲಾಲ್ ಅವರು ಬೈಕ್ ಸವಾರನಿಗೆ ಢಿಕ್ಕಿ ಹೊಡೆದಾಗ, ಪಕ್ಕದಲ್ಲಿದ್ದ ಮಹಿಳೆ ಕಾರು ನಿಲ್ಲಿಸಿ ಸವಾರನನ್ನು ಪರೀಕ್ಷಿಸಲು ಹೇಳುತ್ತಾರೆ. ಆಗ ದಲಾಲ್ ಪ್ರತಿ ದಿನವೂ ಇದು ಸಾಮಾನ್ಯ ಎಂದು ಕಾರು ನಿಲ್ಲಿಸದೇ ಮುಂದೆ ಹೋಗುತ್ತಾರೆ. ಕಾರಿನ ಹಿಂದಿನ ಸೀಟ್‌ ನಲ್ಲಿದ್ದ ವ್ಯಕ್ತಿ ಇಡೀ ಘಟನೆಯನ್ನು ರೆಕಾರ್ಡ್ ಮಾಡುತ್ತಿದ್ದಾರೆ ಎಂದು ರಜತ್ ದಲಾಲ್ ಗೆ ಅರಿವಾಗಿದೆ.

ಈ ವಿಡಿಯೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಅಪಘಾತದ ಬಗ್ಗೆ ರಜತ್ ಏನೂ ಆಗಿಲ್ಲ ಎಂಬಂತೆ ಪ್ರತಿಕ್ರಿಯೆ ನೀಡುತ್ತಿರುವುದು ಜನರಿಗೆ ಆಘಾತವಾಗಿದೆ.

ಪೊಲೀಸರು ರಜತ್ ದಲಾಲ್ ವಿರುದ್ಧ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ ದಂಡ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News