20 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಆರೋಪ | ಸಿಬಿಐಯಿಂದ ಇ.ಡಿ.ಯ ಸಹಾಯಕ ನಿರ್ದೇಶಕನ ಬಂಧನ
Update: 2024-08-08 16:12 GMT
ಹೊಸದಿಲ್ಲಿ: ಮಂಬೈ ಮೂಲದ ಆಭರಣ ವ್ಯಾಪಾರಿಯಿಂದ 20 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಆರೋಪದಲ್ಲಿ ಜಾರಿ ನಿರ್ದೇಶನಾಲಯ (ಈ.ಡಿ)ದ ಸಹಾಯಕ ಅಧಿಕಾರಿಯನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯ ಆಭರಣದ ಅಂಗಡಿಯ ಆವರಣದಲ್ಲಿ ಆಗಸ್ಟ್ 3 ಹಾಗೂ 4ರಂದು ಶೋಧ ಕಾರ್ಯಾಚರಣೆ ನಡೆಸಿತ್ತು. ಅನಂತರ ಅದರ ಸಹಾಯಕ ನಿರ್ದೇಶಕ ಸಂದೀಪ್ ಯಾದವ್ 20 ಲಕ್ಷ ರೂ. ನೀಡದೇ ಇದ್ದರೆ ಪುತ್ರನನ್ನು ಬಂಧಿಸಲಾಗುವುದು ಎಂದು ಆಭರಣ ವ್ಯಾಪಾರಿಗೆ ಬೆದರಿಕೆ ಒಡ್ಡಿದ್ದರು ಎಂದು ಆರೋಪಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.
ಮಾತುಕತೆಯ ಸಂದರ್ಭ ಈ ಮೊತ್ತವನ್ನು 20 ಲಕ್ಷ ರೂ.ಗೆ ಇಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಂಚ ಸ್ವೀಕರಿಸುತ್ತಿರುವ ಸಂದರ್ಭ ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)ಯ ಅಧಿಕಾರಿಯಾಗಿರುವ ಯಾದವ್ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಲಾಯಿತು ಎಂದು ಅವರು ತಿಳಿಸಿದ್ದಾರೆ.