ಭಾರತ-ಚೀನಾ ಗಡಿ ಸಲಹಾ - ಸಮನ್ವಯ ಕ್ರಿಯಾ ಸಮಿತಿಯ 29ನೇ ಸಭೆ

Update: 2024-03-28 15:22 GMT

Photo: PTI 

ಹೊಸದಿಲ್ಲಿ : ಭಾರತ-ಚೀನಾ ಗಡಿ ವಿಷಯಗಳ ಕುರಿತ ಸಲಹಾ ಮತ್ತು ಸಮನ್ವಯ ಕ್ರಿಯಾ ಸಮಿತಿಯ 29ನೇ ಸಭೆಯು ಬೀಜಿಂಗ್ ನಲ್ಲಿ ಬುಧವಾರ ನಡೆಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.

ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿ ಸಂಪೂರ್ಣ ಸೇನಾ ವಾಪಸಾತಿಯನ್ನು ಹೇಗೆ ಸಾಧಿಸುವುದು ಮತ್ತು ಬಗೆಹರಿಯದೆ ಉಳಿದಿರುವ ವಿಷಯಗಳನ್ನು ಹೇಗೆ ಇತ್ಯರ್ಥಪಡಿಸುವುದು ಎಂಬ ವಿಷಯದ ಬಗ್ಗೆ ಸಭೆಯಲ್ಲಿ ದೀರ್ಘ ವಿಚಾರ ವಿನಿಮಯ ನಡೆಸಲಾಯಿತು ಎಂದು ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸಭೆಯಲ್ಲಿ ಭಾಗವಹಿಸಿದ ಭಾರತೀಯ ನಿಯೋಗದ ನೇತೃತ್ವವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ (ಪೂರ್ವ ಏಶ್ಯ) ವಹಿಸಿದ್ದರು.

ಚೀನಾ ನಿಯೋಗದ ನೇತೃತ್ವವನ್ನು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಗಡಿ ಮತ್ತು ಸಾರ ಇಲಾಖೆಯ ಮಹಾನಿರ್ದೇಶಕರು ವಹಿಸಿದ್ದರು ಎಂದು ಹೇಳಿಕೆ ತಿಳಿಸಿದೆ.

‘‘ರಾಜತಾಂತ್ರಿಕ ಮತ್ತು ಸೇನಾ ಮಾರ್ಗಗಳ ಮೂಲಕ ನಿರಂತರ ಸಂಪರ್ಕದಲ್ಲಿರಲು ಉಭಯ ತಂಡಗಳು ಒಪ್ಪಿದವು. ಜೊತೆಗೆ, ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಒಪ್ಪಂದಗಳು ಮತ್ತು ಶಿಷ್ಟಾಚಾರಗಳಿಗೆ ಅನುಗುಣವಾಗಿ ಗಡಿ ಪ್ರದೇಶಗಳಲ್ಲಿ ಶಾಂತಿ ಕಾಯ್ದುಕೊಂಡು ಬರುವ ಅಗತ್ಯವನ್ನು ಉಭಯ ನಿಯೋಗಗಳು ಪ್ರತಿಪಾದಿಸಿದವು’’ ಎಂದು ಅದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News