ಉತ್ತರ ಪ್ರದೇಶದಲ್ಲಿ ಸಿಡಿಲು ಬಡಿದು ಪ್ರತ್ಯೇಕ ಘಟನೆಗಳಲ್ಲಿ 38 ಮಂದಿ ಮೃತ್ಯು

Update: 2024-07-11 08:26 GMT

ಸಾಂದರ್ಭಿಕ ಚಿತ್ರ (PTI)

ಲಕ್ನೊ: ಉತ್ತರ ಪ್ರದೇಶದಾದ್ಯಂತ ಪ್ರತ್ಯೇಕ ಘಟನೆಗಳಲ್ಲಿ ಸಿಡಿಲು ಬಡಿದು 38 ಮಂದಿ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ. ರಾಜ್ಯವು ನೆರೆಯಿಂದ ತತ್ತರಿಸಿರುವಾಗಲೇ ಈ ಭೀಕರ ದುರಂತ ಸಂಭವಿಸಿದೆ.

ಸಿಡಿಲು ಬಡಿದು ಪ್ರತಾಪಗಢದಲ್ಲಿ ಅತಿ ಹೆಚ್ವು ಮಂದಿ (11) ಮೃತಪಟ್ಟಿದ್ದು, ನಂತರ ಸುಲ್ತಾನ್‌ಪುರ್‌ನಲ್ಲಿ ಏಳು ಮಂದಿ, ಚಾಂದೌಲಿಯಲ್ಲಿ 6 ಮಂದಿ, ಮೈನ್‌ಪುರಿಯಲ್ಲಿ ಐದು ಮಂದಿ, ಪ್ರಯಾಗ್‌ರಾಜ್‌ನಲ್ಲಿ ನಾಲ್ಕು ಮಂದಿ, ಔರಯ್ಯ, ಡಿಯೊರಿಯ, ಹಾಥ್ರಸ್, ವಾರಣಾಸಿ ಹಾಗೂ ಸಿದ್ಧಾರ್ಥ್ ನಗರ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಈ ಜಿಲ್ಲೆಗಳಲ್ಲಿ ಹತ್ತಾರು ಮಂದಿ ಸುಟ್ಟು ಗಾಯಗಳಿಗೂ ತುತ್ತಾಗಿದ್ದಾರೆ.

ಪ್ರತಾಪ್ ಗಢ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮೃತ್ಯು ಸಂಭವಿಸಿದ್ದು, ಮೃತದೇಹಗಳನ್ನು  ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಈ ನಡುವೆ, ಉತ್ತರ ಪ್ರದೇಶದ ಚಾಂದೌಲಿಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಅವರೆಲ್ಲ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುಲ್ತಾನ್‌ಪುರ್‌ನಲ್ಲಿ ಮೃತಪಟ್ಟಿರುವ ಏಳು ಮಂದಿಯ ಪೈಕಿ ಮೂವರು ಮಕ್ಕಳಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News