ಸಿಸೋಡಿಯ, ಪತ್ನಿ, ಇತರರ 52 ಕೋಟಿ ರೂ. ಮೌಲ್ಯದ ಸೊತ್ತು ಮುಟ್ಟುಗೋಲು: ಇಡಿ

Update: 2023-07-07 22:22 IST
ಸಿಸೋಡಿಯ, ಪತ್ನಿ, ಇತರರ 52 ಕೋಟಿ ರೂ. ಮೌಲ್ಯದ ಸೊತ್ತು ಮುಟ್ಟುಗೋಲು: ಇಡಿ

Photo: PTI

  • whatsapp icon

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ, ಬಂಧಿತ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯ, ಅವರ ಪತ್ನಿ ಮತ್ತು ಇತರ ಕೆಲವು ಆರೋಪಿಗಳ 52 ಕೋಟಿ ರೂ.ಗೂ ಅಧಿಕ ವೌಲ್ಯದ ಸೊತ್ತುಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಅನುಷ್ಠಾನ ನಿರ್ದೇಶನಾಲಯ (ಇಡಿ) ಶುಕ್ರವಾರ ಹೇಳಿದೆ.

ಮನೀಶ್ ಸಿಸೋಡಿಯ ಮತ್ತು ಅವರ ಪತ್ನಿ ಸೀಮಾ ಸಿಸೋಡಿಯ ಅವರಿಗೆ ಸೇರಿದ ಎರಡು ಸ್ಥಿರ ಆಸ್ತಿಗಳು, ಇನ್ನೋರ್ವ ಆರೋಪಿ ರಾಜೇಶ್ ಜೋಶಿಗೆ ಸೇರಿದ ಸ್ಥಿರಾಸ್ತಿ ಮತ್ತು ಗೌತಮ್ ಮಲ್ಹೋತ್ರ ಎಂಬವರಿಗೆ ಸೇರಿದ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಣ ವರ್ಗಾವಣೆ ತಡೆ ಕಾಯ್ದೆಯಡಿ ಆದೇಶವೊಂದನ್ನು ಹೊರಿಡಿಸಲಾಗಿದೆ. ಇವುಗಳ ಒಟ್ಟು ಮೌಲ್ಯ 7.29 ಕೋಟಿ ರೂ. ಎಂದು ಅದು ತಿಳಿಸಿದೆ.

ಬ್ಯಾಂಕ್ ಠೇವಣಿ ಸೇರಿದಂತೆ 44.29 ಕೋಟಿ ರೂ. ವೌಲ್ಯದ ಚರಾಸ್ತಿಗಳನ್ನೂ ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅನುಷ್ಠಾನ ನಿರ್ದೇಶನಾಲಯ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News