ಜಮ್ಮು ಕಾಶ್ಮೀರದಲ್ಲಿ ಕಣಿವೆಗೆ ಉರುಳಿದ ಕಾರು ; ನಾಲ್ವರು ಸಾವು, ಮೂವರಿಗೆ ಗಾಯ

Update: 2024-03-04 15:57 GMT

Photo: PTI

ಜಮ್ಮು: ಎಸ್ ಯು ವಿ ಕಾರೊಂದು ಜಮ್ಮು ಹಾಗೂ ಕಾಶ್ಮೀರದ ರಾಂಬಾನ್ ಜಿಲ್ಲೆಯಲ್ಲಿ ಸೋಮವಾರ ಕಣಿವೆಗೆ ಉರುಳಿದ ಪರಿಣಾಮ ಅದರಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ ಹಾಗೂ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಖ್ರಾಲ್ನಿಂದ ಮಲಿಗಾಂವ್ ಗೆ ತೆರಳುತ್ತಿದ್ದ ಕಾರು ಮಲಿಗಾಂವ್ ಸಮೀಪ ಜಾರಿ ಕಣಿವೆಗೆ ಉರುಳಿ ಬಿತ್ತು ಎಂದು ಅವರು ಹೇಳಿದ್ದಾರೆ.

ಅಪಘಾತದಲ್ಲಿ ಎಸ್ ಯು ವಿ ಚಾಲಕ ಸಜ್ಜಾದ್ ಅಹ್ಮದ್ ಹಾಗೂ ಮೂವರು ಪ್ರಯಾಣಿಕರಾದ ಅಬ್ದುಲ್ ವಾಹಿದ್ ಬಾಲಿ, ಅನಾಯುತುಲ್ಲಾ, ಮುಹಮ್ಮದ್ ಅಯೂಬ್ ಬಾಲಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಗಾಯಗೊಂಡ ಮೂವರು ವ್ಯಕ್ತಿಗಳನ್ನು ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News