‘ಹದಗೆಡುತ್ತಿರುವ ಕಾನೂನು-ವ್ಯವಸ್ಥೆ’ | ತುರ್ತು ಸಭೆ ಕೋರಿ ಆಪ್ ಶಾಸಕರಿಂದ ಎಲ್‌ಜಿಗೆ ಪತ್ರ

Update: 2024-09-30 15:32 GMT

ವಿ.ಕೆ. ಸಕ್ಸೇನ | PC : ANI 

ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಲ್ಲಿ ಹದಗೆಡುತ್ತಿರುವ ಕಾನೂನು ಮತ್ತು ವ್ಯವಸ್ಥೆ ಪರಿಸ್ಥಿತಿ ಹಾಗೂ ಹೆಚ್ಚುತ್ತಿರುವ ಭೂಗತ ಪಾತಕಿಗಳ ಸುಲಿಗೆ ಪ್ರಕರಣಗಳ ಬಗ್ಗೆ ಚರ್ಚಿಸಲು ತುರ್ತು ಸಭೆಯೊಂದನ್ನು ಏರ್ಪಡಿಸುವಂತೆ ಆಮ್ ಆದ್ಮಿ ಪಕ್ಷದ ಶಾಸಕರು ಸೋಮವಾರ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನರನ್ನು ಒತ್ತಾಯಿಸಿದ್ದಾರೆ.

ದಿಲ್ಲಿಯ ಕಾನೂನು ಮತ್ತು ವ್ಯವಸ್ಥೆ ಪರಿಸ್ಥಿತಿ ಮತ್ತು ಅಗಾಧವಾಗಿ ಹೆಚ್ಚುತ್ತಿರುವ ಭೂಗತ ಪಾತಕಿಗಳ ಚಟುವಟಿಕೆಗಳ ಬಗ್ಗೆ ಆಮ್ ಆದ್ಮಿ ಪಕ್ಷದ ಶಾಸಕರು ಕಳವಳ ವ್ಯಕ್ತಪಡಿಸಿದರು. ಶನಿವಾರ ಉದ್ಯಮಿಗಳ ಸ್ಥಳಗಳ ಮೇಲೆ ನಡೆದ ಗುಂಡಿನ ದಾಳಿಗಳ ಮೂರು ಘಟನೆಗಳನ್ನು ಅವರು ಉಲ್ಲೇಖಿಸಿದ್ದಾರೆ.

‘‘ಭೂಗತ ಪಾತಕಿಗಳು ಯಾವುದೇ ಹೆದರಿಕೆಯಿಲ್ಲದೆ ಕಾರ್ಯಾಚರಣೆ ನಡೆಸುತ್ತಿದ್ದು, ದಿಲ್ಲಿಯ ಪ್ರತಿಯೊಬ್ಬ ವ್ಯಾಪಾರಿ ನಿರಂತರ ಭಯದಲ್ಲಿ ಜೀವಿಸುವಂತಾಗಿದೆ. ಅವರ ಕುಟುಂಬ ಸದಸ್ಯರು ತಮ್ಮ ಜೀವನೋಪಾಯ ಸಂಪಾದಕರ ಸುರಕ್ಷತೆ ಬಗ್ಗೆ ನಿರಂತರವಾಗಿ ಯೋಚಿಸುವಂತಾಗಿದೆ’’ ಎಂದು ಲೆಫ್ಟಿನೆಂಟ್ ಗವರ್ನರ್‌ಗೆ ಬರೆದ ಪತ್ರದಲ್ಲಿ ಆಪ್ ಶಾಸಕರು ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News