ಕೆಲಸದ ಒತ್ತಡ, ವೇತನ ಕಡಿತದ ಬೆದರಿಕೆ | ಬಜಾಜ್ ಫೈನಾನ್ಸ್ ಉದ್ಯೋಗಿ ಆತ್ಮಹತ್ಯೆ

Update: 2024-09-30 14:59 GMT

ಸಾಂದರ್ಭಿಕ ಚಿತ್ರ | PC : NDTV  

ಝಾನ್ಸಿ (ಉತ್ತರ ಪ್ರದೇಶ): ಬಜಾಜ್ ಫೈನಾನ್ಸ್ ನಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ 42 ವರ್ಷದ ವ್ಯಕ್ತಿಯೊಬ್ಬರು ಕೆಲಸದ ಒತ್ತಡ ಮತ್ತು ವೇತನ ಕಡಿತದ ಬೆದರಿಕೆಯಿಂದ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ತರುಣ್ ಸಕ್ಸೇನಾ ಎಂದು ಗುರುತಿಸಲಾಗಿದ್ದು, ಕಳೆದ ಎರಡು ತಿಂಗಳಿನಿಂದ ಟಾರ್ಗೆಟ್ ತಲುಪುವಂತೆ ನನ್ನ ಹಿರಿಯ ಅಧಿಕಾರಿಗಳು ಒತ್ತಡ ಹೇರುತ್ತಿದ್ದರು ಹಾಗೂ ವೇತನ ಕಡಿತದ ಬೆದರಿಕೆ ಒಡ್ಡಿದ್ದರು ಎಂದು ತಮ್ಮ ಡೆತ್ ನೋಟ್ ಬರೆದಿದ್ದಾರೆ.

ಮನೆಗೆಲಸದವರು ತರುಣ್ ಮನೆಗೆ ಬಂದಾಗ, ಅವರು ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತ ತರುಣ್ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಮತ್ತೊಂದು ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಅಧಿಕೃತ ಪ್ರಕರಣ ದಾಖಲಾದ ನಂತರ, ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ತರುಣ್ ಸಕ್ಸೇನಾ, ತಮ್ಮ ತಂದೆ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News