56 ವರ್ಷಗಳ ಶೋಧ ಕಾರ್ಯಾಚರಣೆ ಯಶಸ್ವಿ | ರೊಹ್ತಾಂಗ್ ಪಾಸ್ ನಲ್ಲಿ ಪತನಗೊಂಡಿದ್ದ ಐಎಎಫ್ ವಿಮಾನದಲ್ಲಿದ್ದ ನಾಲ್ವರ ಕಳೇಬರ ಪತ್ತೆ

Update: 2024-09-30 16:44 GMT

PC : PTI 

ಹೊಸದಿಲ್ಲಿ : ಹಿಮಾಚಲ ಪ್ರದೇಶದ ರೊಹ್ತಾಂಗ್ ಪಾಸ್ ನಲ್ಲಿ ಪತನಕ್ಕೀಡಾಗಿದ್ದ ಭಾರತೀಯ ವಾಯಪಡೆಯ AN-12 ವಿಮಾನದಿಂದ 56 ವರ್ಷಗಳ ನಂತರ ನಾಲ್ವರು ಮೃತರ ಕಳೇಬರಗಳನ್ನು ಪತ್ತೆ ಮಾಡಲಾಗಿದ್ದು, ಭಾರತದ ಸುದೀರ್ಘಾವಧಿಯ ಶೋಧ ಕಾರ್ಯಾಚರಣೆಗೆ ಗಮನಾರ್ಹ ಯಶಸ್ಸು ಲಭಿಸಿದೆ.

ಭಾರತೀಯ ಸೇನೆಯ ದೋಗ್ರಾ ಸ್ಕೌಟ್ಸ್ ಹಾಗೂ ತಿರಂಗ ಮೌಂಟೈನ್ ರೆಸ್ಕ್ಯೂ ತಂಡಗಳ ಸಿಬ್ಬಂದಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಕಳೇಬರಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೆಬ್ರವರಿ 7, 1968ರಲ್ಲಿ ಚಂಡೀಗಢದಿಂದ ಲೇಹ್ ಗೆ 102 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಅವಳಿ ಇಂಜಿನ್ ಹೊಂದಿದ್ದ ಟರ್ಬೊಪ್ರಾಪ್ ಸಾರಿಗೆ ವಿಮಾನವು ನಾಪತ್ತೆಯಾಗಿತ್ತು. ಕಳೆದ ಹಲವಾರು ದಶಕಗಳಿಂದ ವಿಮಾನದ ಅವಶೇಷಗಳು ಹಾಗೂ ಮೃತರ ಕಳೇಬರಗಳು ಹಿಮಚ್ಛಾದಿತ ಬೆಟ್ಟಗಳ ನಡುವೆ ನಾಪತ್ತೆಯಾಗಿದ್ದವು.

2005, 2006, 2013 ಹಾಗೂ 2019ರಲ್ಲಿ ನಡೆದಿದ್ದ ಶೋಧ ಕಾರ್ಯಾಚರಣೆಯಲ್ಲಿ ಡೋಗ್ರಾ ಸ್ಕೌಟ್ಸ್ ಮುಂಚೂಣಿಯಲ್ಲಿತ್ತು.

ಅಧಿಕಾರಿಗಳ ಪ್ರಕಾರ, ಪ್ರತಿಕೂಲ ಹವಾಮಾನ ಹಾಗೂ ಕಡಿದಾದ ಬೆಟ್ಟಗಳಿಂದಾಗಿ 2019ರಲ್ಲಿ ನಡೆದಿದ್ದ ಕಾರ್ಯಾಚರಣೆಯಲ್ಲಿ ಕೇವಲ ಐದು ಮೃತ ದೇಹಗಳನ್ನು ಮಾತ್ರ ಪತ್ತೆ ಹಚ್ಚಲಾಗಿತ್ತು.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News