ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಟ ವಿಜಯ್

ನಟ ವಿಜಯ್ | PTI
ಚೆನ್ನೈ: ಇತ್ತೀಚೆಗೆ ಜಾರಿಗೊಳಿಸಲಾದ ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಪ್ರಶ್ನಿಸಿ ತಮಿಳಗ ವೆಟ್ರಿ ಕಝಗಂ (ಟಿವಿಕೆ) ಅಧ್ಯಕ್ಷ ಹಾಗೂ ಜನಪ್ರಿಯ ನಟ ವಿಜಯ್ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾರೆ.
ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿವೆ. ಈ ಅರ್ಜಿಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ತಾರತಮ್ಯ ಎಸಗಲಾಗಿದೆ ಹಾಗೂ ಅವರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ವಿಜಯ್ ಅವರಲ್ಲದೆ, ಎಐಎಂಐಎಂನ ಸಂಸದ ಅಸದುದ್ದೀನ್ ಉವೈಸಿ, ಕಾಂಗ್ರೆಸ್ ಸಂಸದರಾದ ಮುಹಮ್ಮದ್ ಜಾವೇದ್ ಹಾಗೂ ಇಮ್ರಾನ್ ಪ್ರತಾಪ್‌ಗಢಿ, ಆಪ್ ಶಾಸಕ ಅಮಾನತುಲ್ಲಾ ಖಾನ್, ಅಝಾದ್ ಸಮಾಜ ಪಕ್ಷದ ವರಿಷ್ಠ ಚಂದ್ರ ಶೇಖರ್ ಅಝಾದ್ ಸೇರಿದಂತೆ ಹಲವು ರಾಜಕೀಯ ನಾಯಕರು ಹಾಗೂ ಸಂಘಟನೆಗಳು ಕೂಡ ಈ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿವೆ.
ಇತರ ದೂರುದಾರರಲ್ಲಿ ಸಮಾಜವಾದಿ ಪಕ್ಷದ ಸಂಸದ ಝಿಯಾ ಉರ್ ರೆಹ್ಮಾನ್ ಬರ್ಕ್, ಜಮೀಯತ್ ಉಲೇಮಾ ಎ ಹಿಂದ್‌ನ ಮೌಲನಾ ಅರ್ಶದ್ ಮದನಿ, ಸಮಸ್ತ ಕೇರಳ ಜಮೀಯತುಲ್ ಉಲೇಮಾ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಂಗ್ ಹಾಗೂ ನಾಗರಿಕ ಹಕ್ಕುಗಳ ಗುಂಪು ಎಪಿಸಿಆರ್ ಕೂಡ ಸೇರಿದೆ.
ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಕೂಡ ಈ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸಿದೆ.