ರಾಜಸ್ಥಾನದಲ್ಲಿ ಒಬಿಸಿಗಳಲ್ಲಿ ಅತ್ಯಂತ ಹಿಂದುಳಿದ ಜಾತಿಗಳಿಗೆ ಹೆಚ್ಚುವರಿ ಶೇ.6 ಮೀಸಲಾತಿ: ಅಶೋಕ್ ಗೆಹ್ಲೋಟ್

Update: 2023-08-10 07:04 GMT

ಜೈಪುರ: ರಾಜಸ್ಥಾನ ಸರಕಾರವು ಒಬಿಸಿಗಳಲ್ಲಿ ಅತ್ಯಂತ ಹಿಂದುಳಿದ ಜಾತಿಗಳಿಗೆ ಆರು ಶೇಕಡಾ ಮೀಸಲಾತಿಯನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬುಧವಾರ ಘೋಷಿಸಿದ್ದಾರೆ.

ರಾಜ್ಯವು ಈಗಾಗಲೇ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) 21 ಪ್ರತಿಶತ ಮೀಸಲಾತಿ ಒದಗಿಸುತ್ತಿದ್ದು ಶೇ.6 ಹೆಚ್ಚಳದೊಂದಿಗೆ ಒಟ್ಟು ಮೀಸಲಾತಿಯು ಶೇ.27ಕ್ಕೆ ಏರಿಕೆಯಾಗಲಿದೆ.

"OBC ವರ್ಗದಲ್ಲಿ ಅತ್ಯಂತ ಹಿಂದುಳಿದ ಜಾತಿಗಳನ್ನು ಗುರುತಿಸಲು OBC ಆಯೋಗವು ಸಮೀಕ್ಷೆಯನ್ನು ನಡೆಸುತ್ತದೆ ಮತ್ತು ಆಯೋಗವು ಕಾಲಮಿತಿಯಲ್ಲಿ ವರದಿಯನ್ನು ಸಲ್ಲಿಸುತ್ತದೆ" ಎಂದು ಗೆಹ್ಲೋಟ್ ಬುಧವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.

ಇದರೊಂದಿಗೆ ಅತ್ಯಂತ ಹಿಂದುಳಿದ ಜಾತಿಗಳಿಗೆ ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಿಗೆ ಹೆಚ್ಚಿನ ಅವಕಾಶಗಳು ಸಿಗಲಿವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಎಸ್ ಸಿ ಮತ್ತು ಎಸ್ ಟಿಯ ವಿವಿಧ ಸಂಘಟನೆಗಳು ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿಗೆ ನಿರಂತರವಾಗಿ ಒತ್ತಾಯಿಸುತ್ತಿವೆ ಹಾಗೂ ಸರಕಾರವು ಬೇಡಿಕೆಯನ್ನು ಪರಿಶೀಲಿಸುತ್ತಿದೆ ಎಂದು ಗೆಹ್ಲೋಟ್ ಹೇಳಿದರು.

ತಮ್ಮ ಸರಕಾರ ಜಾತಿ ಗಣತಿಯನ್ನು ನಡೆಸುವ ಪರವಾಗಿದೆ. ಒಬಿಸಿ ಕೋಟಾವನ್ನು 21% ರಿಂದ 27% ಕ್ಕೆ ಹೆಚ್ಚಿಸುವತ್ತ ಸಾಗುತ್ತಿದೆ ಎಂದು ಗೆಹ್ಲೋಟ್ ಘೋಷಿಸಿದರು, ಇದು OBC ಮತ ಬ್ಯಾಂಕ್ ನಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾನವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

ರಾಜಸ್ಥಾನದಲ್ಲಿ OBC ಜನಸಂಖ್ಯೆಯು 50 ಶೇ. ಕ್ಕಿಂತ ಹೆಚ್ಚಿದೆ. ಜಾತಿ ಗಣತಿಯು ಅತ್ಯಂತ ಹಿಂದುಳಿದ ಜಾತಿಗಳನ್ನು ಗುರುತಿಸಲು ಮತ್ತು ಮೀಸಲಾತಿಯ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಗೆಹ್ಲೋಟ್ ಹೇಳಿದರು.

"ರಾಹುಲ್ ಗಾಂಧಿಯವರು ಜಾತಿ ಗಣತಿಯ ಪರವಾಗಿದ್ದಾರೆ ಮತ್ತು ನಾವು ರಾಜಸ್ಥಾನದಲ್ಲಿ ಜಾತಿ ಗಣತಿಯನ್ನು ಬಯಸುತ್ತೇವೆ, ಇದರಿಂದ ಅತ್ಯಂತ ಹಿಂದುಳಿದವರು ಅದರ ಪ್ರಯೋಜನ ಪಡೆಯುತ್ತಾರೆ" ಎಂದು ಮುಖ್ಯಮಂತ್ರಿ ಗೆಹ್ಲೋಟ್ ಅವರು ಅಂತಾರಾಷ್ಟ್ರೀಯ ದಿನದಂದು ಬನ್ಸ್ವಾರಾದಲ್ಲಿ ಆಯೋಜಿಸಲಾದ ಕಾಂಗ್ರೆಸ್ ರ್ಯಾಲಿಯಲ್ಲಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News