“ಬಿಜೆಪಿ ತನ್ನ ವರದಿ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದೆ”: ಕೇಸರಿ ಪಕ್ಷವನ್ನು ಖಂಡಿಸಿದ ಫ್ರೆಂಚ್ ಸುದ್ದಿ ಸಂಸ್ಥೆ “ಮೀಡಿಯಾ ಪಾರ್ಟ್”

Update: 2024-12-08 17:42 GMT

PC : PTI

ಹೊಸದಿಲ್ಲಿ: ಪಕ್ಷದ ಲಾಭಕ್ಕಾಗಿ ತನ್ನ ವರದಿಯನ್ನು ದುರ್ಬಳಕೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಫ್ರೆಂಚ್ ತನಿಖಾ ಮಾಧ್ಯಮ ಸಂಸ್ಥೆಯೊಂದು ಬಿಜೆಪಿಯನ್ನು ಖಂಡಿಸಿದೆ.

ಭಾರತದ ಸರಕಾರವನ್ನು ಅಸ್ಥಿರಗೊಳಿಸುವ ಗುರಿಯನ್ನು ಅಮೆರಿಕ ರಾಜ್ಯ ಇಲಾಖೆ, ಕೋಟ್ಯಧಿಪತಿ ಜಾರ್ಜ್ ಸೋರಸ್ ಹಾಗೂ ಭಾರತದಲ್ಲಿನ ವಿರೋಧ ಪಕ್ಷಗಳು ಹೊಂದಿವೆ ಎಂಬ ಆರೋಪಗಳಿಗೆ ಯಾವುದೇ ವಾಸ್ತವಾಂಶಗಳು ಲಭ್ಯವಿಲ್ಲ ಎಂದು ಸಂಸ್ಥೆ ತನ್ನ ವರದಿಯ ಕುರಿತು ಸ್ಪಷ್ಟಪಡಿಸಿದೆ ಎಂದು thewire.in ವರದಿ ಮಾಡಿದೆ.

ಫ್ರೆಂಚ್‌ ವಾಹಿನಿ ಸಂಸ್ಥೆ ಮೀಡಿಯಾ ಪಾರ್ಟ್ ನಲ್ಲಿ ಬಂದಿದ್ದ ವರದಿಯನ್ನು ಬಳಸಿಕೊಂಡಿದ್ದ ಬಿಜೆಪಿಯು, “ಸೋರಸ್ ಹಾಗೂ ಅಮೆರಿಕ ರಾಜ್ಯ ಇಲಾಖೆಯ ಬೆಂಬಲದೊಂದಿಗೆ ಕಾಂಗ್ರೆಸ್ ಹಾಗೂ ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿಯನ್ನು ಗುರಿ ಮಾಡಿಕೊಂಡಿದ್ದಾರೆ” ಎಂದು ಪ್ರಚಾರ ಮಾಡಿತ್ತು.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಮೀಡಿಯಾ ಪಾರ್ಟ್ ನಿರ್ದೇಶಕ ಕ್ಯಾರಿನ್ ಫೌಟಿಯು, “ಇತ್ತೀಚೆಗೆ ಸಂಘಟಿತ ಅಪರಾಧ ಹಾಗೂ ಭ್ರಷ್ಟಾಚಾರ ವರದಿ ಯೋಜನೆ (ಒಸಿಸಿಆರ್ಪಿ) ವಿರುದ್ಧ ಪ್ರಕಟಗೊಂಡಿದ್ದ ನಮ್ಮ ತನಿಖಾ ವರದಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಭಾರತೀಯ ಜನತಾ ಪಕ್ಷ ತನ್ನ ರಾಜಕೀಯ ಕಾರ್ಯಸೂಚಿ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸಲು ಬಳಸಿಕೊಳ್ಳುತ್ತಿರುವುದನ್ನು ದೃಢವಾಗಿ ಖಂಡಿಸುತ್ತೇವೆ” ಎಂದು ಹೇಳಿದ್ದಾರೆ.

“ಬಿಜೆಪಿಯು ಎಂದೂ ಪ್ರಕಟವಾಗದ ಸುಳ್ಳು ಸುದ್ದಿಯನ್ನು ಹರಡಲು ಮೀಡಿಯಾ ಪಾರ್ಟ್ ಲೇಖನವನ್ನು ದುರ್ಬಳಕೆ ಮಾಡಿಕೊಂಡಿದೆ” ಎಂದೂ ಅವರು ಹೇಳಿದ್ದಾರೆ.

ಭಾರತ ಸರ್ಕಾರವನ್ನು ಅಸ್ಥಿರಗೊಳಿಸುವ ಬಗ್ಗೆ ಬಿಜೆಪಿ ಮಾಡಿರುವ ಆರೋಪವನ್ನು ಅಮೆರಿಕಾ ಕೂಡಾ ತಳ್ಳಿ ಹಾಕಿದ್ದು, ಈ ಆರೋಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News