ಭಾರತದ ಪ್ರತಿ 10 ಮಂದಿ ಇಂಟರ್ನೆಟ್ ಬಳಕೆದಾರರಲ್ಲಿ 9 ಮಂದಿಯಿಂದ AI ಬಳಕೆ

Update: 2024-04-24 16:43 GMT

Representational Image (Photo: pixabay.com)

ಮುಂಬೈ : ಭಾರತದಲ್ಲಿ ಪ್ರತಿ 10 ಇಂಟರ್ನೆಟ್ ಬಳಕೆದಾರರಲ್ಲಿ 9 ಮಂದಿ ಈಗಾಗಲೇ ಕೃತಕ ಬುದ್ದಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾರೆಂದು ದತ್ತಾಂಶ ಹಾಗೂ ವಿಶ್ಲೇಷಕ ಸಂಸ್ಥೆ ಕ್ಯಾಂಟಾರ್ ವರದಿ ತಿಳಿಸಿದೆ. ಮೊಬೈಲ್ ಫೋನ್ ಗಳು, ಕನೆಕ್ಟಿವಿಟಿ (ಸಂಪರ್ಕಶೀಲತೆ) ಹಾಗೂ ಕ್ಲೌಡ್ ಮೂಲಸೌಕರ್ಯ ತಂತ್ರಜ್ಞಾನ ಇತ್ಯಾದಿಗಳ ಮೂಲಕ ಅವರಿಗೆ ಎಐ ತಂತ್ರಜ್ಞಾನದ ಪರಿಚಯವಾಗಿದೆಯೆಂದು ವರದಿ ಅಭಿಪ್ರಾಯಿಸಿದೆ.

ಪ್ರಸಕ್ತ ದೇಶದಲ್ಲಿ 72.40 ಕೋಟಿ ಎಐ ಬಳಕೆದಾರರಿದ್ದು, ವರ್ಷಂಪ್ರತಿ ಅದು ಶೇ.6ರಷ್ಟು ಬೆಳವಣಿಗೆಯನ್ನು ಸಾಧಿಸುವ ನಿರೀಕ್ಷೆಯಿದೆ.

ಈ ಬಳಕೆದಾರರು ಇಮೇಜ್ ಫಿಲ್ಟರ್, ವ್ಯಕ್ತಿಗತವಾದ ಶಿಫಾರಸುಗಳು ಹಾಗೂ ಸ್ಮಾರ್ಟ್ ಉಪಕರಣಗಳ ಮೂಲಕ ಈ ಪೈಕಿ ಯಾವುದಾದರೂ ಒಂದು ಎಐ ಫೀಚರ್ಗಳನ್ನು ಬಳಸಿಕೊಂಡಿದ್ದಾರೆಂದು ವರದಿ ತಿಇಸಿದೆ.

ಎಐ ಬಳಕೆಯಲ್ಲಿ ಸಾಮಾಜಿಕ ಜಾಲತಾಣ ಹಾಗೂ ಫಿಟ್ನೆಸ್ ಆ್ಯಪ್ ಗಳು ಅಗ್ರಪಂಕ್ತಿಯಲ್ಲಿವೆ. ಮನರಂಜನಾ ಆ್ಯಪ್ ಗಳು ಆನಂತರದ ಸ್ಥಾನದಲ್ಲಿವೆ.

19ರಿಂದ 24 ವರ್ಷದೊಳಗಿನವರಲ್ಲಿ ಎಐ ತಂತ್ರಜ್ಞಾನದ ಬಳಕೆಯು ಅಧಿಕ ಪ್ರಮಾಣದಲ್ಲಿದೆ. ಆದರೆ 45 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರಲ್ಲಿ ಆ ಪ್ರಮಾಣವು ಶೇ.81ರಷ್ಟಾಗಿದೆ.

ಗ್ರಾಹಕರು ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಅಪ್ಪಿಕೊಂಡಿದ್ದರಾದರೂ, ಖಾಸಗಿತನ ಹಾಗೂ ಸುರಕ್ಷತಾ ಕಾಳಜಿಯಿಂದಾಗಿ ಮಾರ್ಕೆಟಿಂಗ್ ಕ್ಷೇತ್ರದಲ್ಲಿರುವವರಲ್ಲಿ ಎಐ ತಂತ್ರಜ್ಞಾನದ ಬಳಕೆಯು ಅಷ್ಟೊಂದು ವ್ಯಾಪಕವಾಗಿಲ್ಲವೆಂದು ಸಮೀಕ್ಷಾ ವರದಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News