''ಬಡವರ ಮನೆಗಳಲ್ಲೂ ಬೆಳಕನ್ನು ಹರಡಬೇಕು'': ಅಯೋಧ್ಯೆಯಲ್ಲಿ ಮಕ್ಕಳು ದೀಪಗಳಿಂದ ತೈಲವನ್ನು ಎತ್ತಿಕೊಳ್ಳುತ್ತಿರುವ ವಿಡಿಯೊವನ್ನು ಹಂಚಿಕೊಂಡ ಅಖಿಲೇಶ್ ಯಾದವ್

Update: 2023-11-12 10:49 GMT

Screengrab (X/@yadavakhilesh)

ಲಕ್ನೊ: ಅಯೋಧ್ಯೆಯಲ್ಲಿನ ಸರಯು ನದಿ ದಡದಲ್ಲಿ 22 ಲಕ್ಷ ನೆಲ ದೀಪಗಳನ್ನು ಹಚ್ಚಿದ ಮರುದಿನ ಘಾಟ್ ಒಂದರ ಬಳಿಯ ದೀಪಗಳಿಂದ ಮಕ್ಕಳು ತೈಲವನ್ನು ತೆಗೆದುಕೊಂಡು ತಮ್ಮ ಪಾತ್ರೆಗಳಿಗೆ ತುಂಬಿಸಿಕೊಳ್ಳುತ್ತಿರುವ ವಿಡಿಯೊವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

“ದೈವಿಕ ಕ್ಷಣದಲ್ಲಿ ಬಡತನ… ದೀಪಗಳಿಂದ ತೈಲವನ್ನು ತೆಗೆದುಕೊಳ್ಳುವಂತೆ ಮಾಡುವ ಬಡತನ ಇರುವ ಕಡೆ ಬೆಳಕಿನ ಹಬ್ಬವು ಮಂಕಾಗುತ್ತದೆ. ಇಂತಹ ಹಬ್ಬಗಳು ಕೇವಲ ಘಾಟ್ ನಲ್ಲಿ ಮಾತ್ರ ನಡೆಯದೆ, ಎಲ್ಲ ಬಡವರ ಮನೆಗಳಲ್ಲೂ ಬೆಳಕನ್ನು ಹರಡಬೇಕು ಎಂಬುದೇ ನಮ್ಮ ಬಯಕೆಯಾಗಿದೆ” ಎಂದು ಅವರು ಹೇಳಿದ್ದಾರೆ.

ಏಳನೆ ಆವೃತ್ತಿಯ ದೀಪೋತ್ಸವದಲ್ಲಿ ಅಯೋಧ್ಯೆಯಲ್ಲಿನ ಸರಯು ನದಿ ದಡದ ಮೇಲೆ ದಾಖಲೆಯ 22 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಲಾಗಿತ್ತು.

ಈ ವರ್ಷ 22.23 ನೆಲದ ಮೇಲಿನ ದೀಪಗಳನ್ನು ಹಚ್ಚಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 6.47 ಲಕ್ಷ ಅಧಿಕ ದೀಪಗಳನ್ನು ಹಚ್ಚಲಾಗಿದೆ. ಈ ದೀಪಗಳನ್ನು 25,000 ಸ್ವಯಂಸೇವಕರು ನದಿಯುದ್ದಕ್ಕೂ ಇರುವ 51 ಘಾಟ್ ಗಳಲ್ಲಿ ಹಚ್ಚಿದ್ದರು.

ಗಿನ್ನಿಸ್ ಬುಕ್ ವಲ್ಡ್ ರೆಕಾರ್ಡ್ಸ್ ನ ಪ್ರತಿನಿಧಿಗಳು ಈ ದೀಪಗಳನ್ನು ಡ್ರೋನ್ ನೆರವಿನಿಂದ ಲೆಕ್ಕ ಹಾಕಿ, ವಿಶ್ವ ದಾಖಲೆಯಲ್ಲಿ ನೋಂದಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News