“ಎಲ್ಲಾ ಪುರುಷ ವರದಿಗಾರರಿದ್ದೀರಿ, ಮಹಿಳಾ ವರದಿಗಾರರಿಲ್ಲವೇ?”: ಅಖಿಲೇಶ್ ಯಾದವ್ ಪ್ರಶ್ನೆ

Update: 2024-02-04 07:53 GMT

ಬಾರಾಬಂಕಿ: ಸಮಾಜವಾದಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಹಿಳಾ ಸರಪಂಚರ ಬದಲಿಗೆ ಅವರ ಮೈದುನ ಭಾಗಿಯಾಗಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮಹಿಳಾ ವರದಿಗಾರರು ಏಕೆ ಬಂದಿಲ್ಲ? ನೀವೆಲ್ಲ ಪುರುಷ ವರದಿಗಾರರಲ್ಲವೇ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ ಎಂದು ndtv ವರದಿ ಮಾಡಿದೆ.

ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಬೆಲ್ಹರಾ ಪಂಚಾಯತ್ ವ್ಯಾಪ್ತಿಯಲ್ಲಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸುವ ಕಾರ್ಯಕ್ರಮದಲ್ಲಿ ವರದಿಗಾಗರರು ಕೇಳಿದ ಪ್ರಶ್ನೆಗೆ ಅಖಿಲೇಶ್ ಹೀಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಸರಪಂಚ್ ಶಬಾನಾ ಖಾತುನ್ ಕಾರ್ಯಕ್ರಮದ ಆಯೋಜಕರಾಗಿದ್ದರೂ ಅವರು ಕಾರ್ಯಕ್ರಮದಲ್ಲಿರಲಿಲ್ಲ. ಕಾರ್ಯಕ್ರಮದ ಬ್ಯಾನರ್ಗಲ್ಲಿ ಅವರ ಹೆಸರೂ ಇರಲಿಲ್ಲ. ಬದಲಾಗಿ ಅವರ ಮೈದುನ ಅಯಾಜ್ ಖಾನ್ ಹಾಜರಿದ್ದರು ಎಂದು ತಿಳಿದು ಬಂದಿದೆ.

ಬೆಲ್ಹಾರ ಪಂಚಾಯತ್ ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. ಕಳೆದ ಚುನಾವಣೆಯಲ್ಲಿ ಖತುನ್ ಅವರು ಅಲ್ಲಿಂದ ಆಯ್ಕೆಯಾಗಿದ್ದರು. ಆದರೆ ಆಕೆ ಯಾವುದೇ ಪಂಚಾಯತ್ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಅಧಿಕೃತ ದಾಖಲೆಗಳನ್ನು ಸಹಿ ಮಾಡಲು ಸರಪಂಚರ ಮನೆಗೆ ಕಳುಹಿಸುವ ಪರಿಪಾಟ ಜಾರಿಯಲ್ಲಿದೆ. ಪಂಚಾಯಿತಿಯ ಎಲ್ಲಾ ನಿರ್ಧಾರಗಳನ್ನು ಆಕೆಯ ಮೈದುನ ತೆಗೆದುಕೊಳ್ಳುತ್ತಾನೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ವಾಸ್ತವವಾಗಿ, ಅಂತಹ ಹಲವಾರು ಮೀಸಲು ಸ್ಥಾನಗಳಲ್ಲಿ, ಮಹಿಳಾ ಸರಪಂಚ್‌ಗಳ ಪತಿ ಮತ್ತು ಇತರ ಪುರುಷ ಸಂಬಂಧಿಗಳು ವಾಸ್ತವಿಕ ಸರಪಂಚ್ ರಂತೆ ವರ್ತಿಸುತ್ತಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ, ವರದಿಗಾರು ಯಾದವ್ ಅವರನ್ನು ಮಹಿಳಾ ಸರಪಂಚ್ ಪ್ರತಿನಿಧಿಸುವ ಪುರುಷ ಸಂಬಂಧಿಗಳ ಅಧಿಕಾರ ಅನುಭವಿಸಿ, ಹೇಗೆ ಮಹಿಳಾ ಸಬಲೀಕರಣದವಾಗುತ್ತದೆ ಎಂದು ಕೇಳಿದರು. "ಇದೇನು ಹೊಸತೇ? ಎಷ್ಟೊಂದು ಪ್ರಧಾನ್‌ಪತಿಗಳು (ಮಹಿಳಾ ಪ್ರಧಾನರ ಗಂಡಂದಿರು) ಇಲ್ಲಿದ್ದಾರೆ. ನೀವು ಪುರುಷ ವರದಿಗಾರರೇ ಏಕೆ ಬಂದಿದ್ದೀರಿ, ಮಹಿಳಾ ವರದಿಗಾರರಲಿಲ್ಲವೇ?" ಎಂದು ಅಖಿಲೇಶ್ ಯಾದವ್ ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News