1998ರ ತರಗತಿಯ ವಿದ್ಯಾರ್ಥಿಗಳಿಂದ ಐಐಟಿ-ಬಾಂಬೆಗೆ 57 ಕೋ.ರೂ.ದೇಣಿಗೆ

Update: 2023-12-24 16:12 GMT

Photo : twitter/iitbombay

ಮುಂಬೈ: ಐಐಟಿ-ಬಾಂಬೆಯಿಂದ 1998ರಲ್ಲಿ ಪದವಿ ಪಡೆದಿದ್ದ ಹಳೆಯ ವಿದ್ಯಾರ್ಥಿಗಳು ಬೆಳ್ಳಿಹಬ್ಬದ ಪುನರ್ಮಿಲನ ಸಂಭ್ರಮದ ಅಂಗವಾಗಿ ತಾವು ಕಲಿತ ಶಿಕ್ಷಣ ಸಂಸ್ಥೆಗೆ 57 ಕೋ.ರೂ.ಗಳ ದೇಣಿಗೆಯನ್ನು ನೀಡಿದ್ದಾರೆ.

ಇದು ಒಂದೇ ವರ್ಗದ ಅತ್ಯಂತ ದೊಡ್ಡ ಸಂಯೋಜಿತ ದೇಣಿಗೆಯಾಗಿದ್ದು,1971ರ ತರಗತಿಯು ಸುವರ್ಣ ಮಹೋತ್ಸವ ಸಂದರ್ಭದಲ್ಲಿ ನೀಡಿದ್ದ 41 ಕೋ.ರೂ.ಗಳ ದೇಣಿಗೆಯ ಹಿಂದಿನ ದಾಖಲೆಯನ್ನು ಮುರಿದಿದೆ ಎಂದು ಎಕ್ಸ್ ಬಳಕೆದಾರರರೋರ್ವರು ಪೋಸ್ಟ್ ಮಾಡಿದ್ದಾರೆ.

ವೆಕ್ಟರ್ ಕ್ಯಾಪಿಟಲ್ ಎಂಡಿ ಅನುಪಮ ಬ್ಯಾನರ್ಜಿ,ಸಿಲ್ವರ್ ಲೇಕ್ನ ಎಂಡಿ ಅಪೂರ್ವ ಸಕ್ಸೇನಾ,ಗೂಗಲ್ ಡೀಪ್ಮೈಂಡ್ನ ಎಐ ಸಂಶೋಧಕ ದಿಲೀಪ ಜಾರ್ಜ್,ಎಚ್ಸಿಎಲ್ ಅಮೆರಿಕಾಸ್ ಚೀಫ್ ಗ್ರೋಥ್ ಆಫೀಸರ್ ಶ್ರೀಕಾಂತ ಶೆಟ್ಟಿ ಸೇರಿದಂತೆ 200ಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳು ಗಣನೀಯ ದೇಣಿಗೆಗಳನ್ನು ನೀಡಿದ್ದಾರೆ.

1998ರ ತರಗತಿಯು ಸಂಗ್ರಹಿಸಿರುವ ನಿಧಿಯು ಐಐಟಿ-ಬಾಂಬೆಯ ಮುಖ್ಯ ಶೈಕ್ಷಣಿಕ ಯೋಜನೆಗಳು ಮತ್ತು ಸಂಶೋಧನಾ ಕ್ಷೇತ್ರವನ್ನು ಬೆಂಬಲಿಸಲು ಸಂಸ್ಥೆಗೆ ನೆರವಾಗಲಿದೆ ಎಂದು ಶ್ರೀಕಾಂತ ಶೆಟ್ಟಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News