ನಿಯಮಗಳನ್ನು ಪಾಲಿಸದೆ ಅನುಕಂಪದ ನೆಲೆಯಲ್ಲಿ ಉದ್ಯೋಗ ನೀಡುವಂತಿಲ್ಲ : ಸುಪ್ರೀಂಕೋರ್ಟ್

Update: 2024-11-14 15:14 GMT

ಸುಪ್ರೀಂಕೋರ್ಟ್ | PC : PTI

ಹೊಸದಿಲ್ಲಿ : ಸರಕಾರಿ ಉದ್ಯೋಗಿ ಮೃತಪಟ್ಟಲ್ಲಿ ಆತನ ಅವಲಂಭಿತನಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಬೇಕೆಂಬ ನಿಯಮಗಳು ಸ್ಥಾಪಿತ ಹಕ್ಕುಗಳಲ್ಲ.ಅದರೆ ಅದು ಸರಕಾರಿ ಉದ್ಯೋಗಿಯ ನಿಧನದ ಬಳಿಕ ಆತನ/ಆಕೆಯ ಕುಟುಂಬವು ಎದುರಿಸಬಹುದಾದಂತಹ ಹಠಾತ್ ಆರ್ಥಿಕ ಸಂಕಷ್ಟವನ್ನು ದೂರಮಾಡುವ ಉದ್ದೇಶವನ್ನು ಹೊಂದಿರುವ ಪರಿಹಾರ ಕ್ರಮವಾಗಿದೆ ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ.

ಸರಕಾರಿ ಹುದ್ದೆಗಳಿಗೆ ಅನುಕಂಪದ ಆಧಾರದಲ್ಲಿ ಮಾಡಡಲಾಗುವಂತಹ ನೇಮಕಾತಿಗಳು ಶಾಸನಾತ್ಮಕ ನೀತಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಮಾರ್ಗದರ್ಶಿ ಸೂತ್ರಗಳಿಗೆ ಕಟ್ಟುನಿಟ್ಟಾಗಿ ಬದ್ಧವಾಗಿರಬೇಕು ಹಾಗೂ ಅದನ್ನು ಸ್ಥಾಪಿತ ಹಕ್ಕೆಂದು ಪ್ರತಿಪಾದಿಸಬಾರದೆಂದು ನ್ಯಾಯಮೂರ್ತಿಗಳಾದ ಎ.ಎಸ್. ಓಕಾ, ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ಎ.ಜಿ. ಮಸೀಹ ಅವರನ್ನೊಳಗೊಂಡ ನ್ಯಾಯಪೀಠವು ಹೇಳಿದೆ.

ಆದರೆ ಮೃತ ಉದ್ಯೋಗಿಯ ಅವಲಂಭಿತನಿಗೆ ಯಾವುದೇ ಪರಿಶೀಲನೆ ಅಥವಾ ಆಯ್ಕೆ ಪ್ರಕ್ರಿಯೆ ನಡೆಸದೆ ಉದ್ಯೋಗವನ್ನು ನೀಡಬೇಕೆಂದು ಹೇಳಲು ಸಾಧ್ಯವಿಲ್ಲ .ಉದ್ಯೋಗಿಯ ನಿಧನದ ಬಳಿಕ ತೀವ್ರವಾದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಕುಟುಂಬವನ್ನು ಪಾರುಮಾಡುವ ಉದ್ದೇಶದಿಂದ ಅನುಕಂಪದ ಉದ್ಯೋಗವನ್ನು ನೀಡಲಾಗುತ್ತದೆ. ಆದಾಗ್ಯೂ, ಉದ್ಯೋಗವನ್ನು ಕೋರಿರುವ ಅವಲಂಭಿತ ವ್ಯಕ್ತಿಯು ನೇಮಕಾತಿಯ ಕುರಿತಾಗಿ ರೂಪಿಸಲಾದ ನೀತಿ, ನಿರ್ದೇಶನಗಳ ಅಥವಾ ನಿಯಮಗಳ ಅವಶ್ಯಕತೆಗಳನ್ನು ಪೂರೈಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಅನುಕಂಪದ ನೆಲೆಯಲ್ಲಿ ಉದ್ಯೋಗ ಕುರಿತಾದ ನೀತಿ, ನಿರ್ದೇಶನಗಳು ಅಥವಾ ನಿಯಮಗನ್ನು ಪಾಲಿಸದೆ ಅವಲಂಭಿತನಿಗೆ ನೌಕರಿಯನ್ನು ನೀಡಲಾಗದು ಎಂದು ಸುಪ್ರೀಂಕೋರ್ಟ್ ನ್ಯಾಯಪಿದು ಆದೇಶದಲ್ಲಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News