ಹರ್ಯಾಣ ಶಿವಸೇನಾ ನಾಯಕನಿಗೆ ಬಿಷ್ಣೋಯಿ ಗ್ಯಾಂಗ್‌ನಿಂದ ಜೀವಬೆದರಿಕೆ

Update: 2024-11-14 16:20 GMT

 ಲಾರೆನ್ಸ್ ಬಿಷ್ಣೋಯಿ |  ANI 

ಗುರ್ಗಾಂವ್ : ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ ನಿಂದ ತನಗೆ ಜೀವಬೆದರಿಕೆ ಕರೆ ಬಂದಿರುವುದಾಗಿ ಶಿವಸೇನಾದ ಹರ್ಯಾಣ ಘಟಕದ ಉಸ್ತುವಾರಿ ವಿಕ್ರಮ್ ಸಿಂಗ್ ಅವರು ಬುಧವಾರ ದೂರು ನೀಡಿದ್ದಾರೆ.

ಕರೆಮಾಡಿದಾತನು ರೋಹಿತ್ ಗೋಡಾರ ಎಂಬುದಾಗಿ ಆತನನ್ನು ಪರಿಚಯಿಸಿಕೊಂಡಿದ್ದು,ತಾನು ನಡೆಸುತ್ತಿರುವ ಉದ್ಯಮದಲ್ಲಿ ಪಾಲು ನೀಡುವಂತೆ ಕೇಳಿದ್ದಾನೆಂದು ವಿಕ್ರಮ್ ಸಿಂಗ್ ಅವರು ಆನ್‌ಲೈನ್ ಮೂಲಕ ಗುರ್ಗಾಂವ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆಯೆಂದು ಹರ್ಯಾಣದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನವೆಂಬರ್ 11ರಂದು ಮಧ್ಯಾಹ್ನ 3:00 ಗಂಟೆಯ ವೇಳೆಗೆ ಬ್ರಿಟನ್‌ ನ ದೂರವಾಣಿ ಸಂಖ್ಯೆಯೊಂದರಿಂದ ತನಗೆ ವಾಟ್ಸ್‌ಅಪ್ ಕರೆ ಬಂದಿತ್ತು. ಕರೆ ಮಾಡಿದಾತನು ತನಗೆ ಒಂದು ದಿನದ ಕಾಲಾವಕಾಶ ನೀಡಿದ್ದು, ತಾನು ನಡೆಸುತ್ತಿರುವ ಉದ್ಯಮದಲ್ಲಿ ಪಾಲು ನೀಡದೇ ಇದ್ದಲ್ಲಿ ತನ್ನನ್ನು ಹತ್ಯೆಗೈಯುವುದಾಗಿ ಬೆದರಿಕೆಯೊಡ್ಡಿದ್ದನೆಂದು ವಿಕ್ರಮ್‌ಸಿಂಗ್ ದೂರಿನಲ್ಲಿ ತಿಳಿಸಿದ್ದಾರೆ.

ಈ ವಿಷಯವಾಗಿ ತನ್ನನ್ನು ಸಂಪರ್ಕಿಸಿದ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಸಿಂಗ್ ಅವರುಸಿಂಗ್ ಅವರು, ಒಂದು ವೇಳೆ ಯಾವುದೇ ತನಗೆ ಅಥವಾ ತನ್ನ ಕುಟುಂಬದ ಸದಸ್ಯರಿಗೆ ಏನಾದರೂ ಅಪಾಯವಾದಲ್ಲಿ ಅದಕ್ಕೆ ಬಿಜೆಪಿ ಸರಕಾರವೇ ಹೊಣೆಗಾರನೆಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News