ಮೇಘಾಲಯದ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವುದರಿಂದ ತಡೆದ ಅಮಿತ್ ಶಾ : ರಾಹುಲ್ ಗಾಂಧಿ ಆರೋಪ

Update: 2024-01-23 12:14 GMT

ರಾಹುಲ್‌ ಗಾಂಧಿ | Photo: Bharat Jodo Nyay Yatra/ X

ಗುವಾಹಟಿ: ಮೇಘಾಲಯದ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವುದರಿಂದ ಕೇಂದ್ರ ಗೃಹ ಅಮಿತ್ ಶಾ ಆದೇಶದಂತೆ ತಡೆಯಲಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ತಮ್ಮ ಕಾಂಗ್ರೆಸ್‌ ಭಾರತ್‌ ಜೋಡೋ ನ್ಯಾಯ್‌ ಯಾತ್ರೆಯ ಭಾಗವಾಗಿ ಆಸ್ಸಾಂ ಗಡಿಗೆ ಸಮೀಪದಲ್ಲಿರುವ ಮೇಘಾಲಯದ ರೈ ಭೋಯಿ ಜಿಲ್ಲೆಯಲ್ಲಿರುವ ಯುನಿವರ್ಸಿಟಿ ಆಫ್‌ ಸಯನ್ಸ್‌ ಆಂಡ್‌ ಟೆಕ್ನಾಲಜಿಗೆ ಭೇಟಿ ನೀಡುವ ಉದ್ದೇಶ ರಾಹುಲ್‌ ಗಾಂಧಿ ಅವರಿಗಿತ್ತು. ಆದರೆ ಅವರ ಭೇಟಿಗೆ ವಿವಿ ಆಡಳಿತದ ಅನುಮತಿ ನಿರಾಕರಿಸಿದ ನಂತರದ ಕಾರ್ಯಕ್ರಮವನ್ನು ಹತ್ತಿರದ ಹೋಟೆಲ್‌ ಒಂದಕ್ಕೆ ಸ್ಥಳಾಂತರಿಸಲಾಯಿತು.

“ಭಾರತದ ಗೃಹ ಸಚಿವರು, ಅಸ್ಸಾಂ ಸಿಎಂಗೆ ಕರೆ ಮಾಡಿದರು. ನಂತರ ಅಸ್ಸಾಂ ಮುಖ್ಯಮಂತ್ರಿ ಕಚೇರಿ ವಿವಿ ಆಡಳಿತವನ್ನು ಸಂಪರ್ಕಿಸಿತು. ರಾಹುಲ್ ಗಾಂಧಿ ವಿದ್ಯಾರ್ಥಿಗಳಿಗೆ ಸಂವಹನ ನಡೆಸಲು ಅವಕಾಶ ನೀಡಬಾರದು ಎಂದು ಸೂಚಿಸಿದರು” ಎಂದು ತಮ್ಮ ಬಸ್‌ನಲ್ಲಿ ನಿಂತು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

"ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಈ ದೇಶದ ನಾಯಕತ್ವದ ಆದೇಶವನ್ನು ನೀವು ಮೌನವಾಗಿ ಪಾಲಿಸುತ್ತೀರಿ" ಎಂದು ರಾಹುಲ್ ಹೇಳಿದರು.

ಸೋಮವಾರ ರಾಹುಲ್‌ ಅವರಿಗೆ ಅಸ್ಸಾಮಿನ ನಾಗೋನ್‌ನಲ್ಲಿರುವ ಬತದ್ರವ ದೇವಾಲಯ ಪ್ರವೇಶಿಸಲು ನಿರಾಕರಿಸಿದ್ದ ಘಟನೆ ನಡೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News