ಸ್ವಾತಿ ಮಲಿವಾಲ್ ಗೆ ಹಲ್ಲೆ ಆರೋಪ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ನಿವಾಸದ ವಿಡಿಯೊ ವೈರಲ್

Update: 2024-05-17 13:27 GMT

screengrab : PC : X \ @AamAadmiParty

ಹೊಸದಿಲ್ಲಿ: ಆಪ್ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ರ ಆಪ್ತ ಬಿಭವ್ ಕುಮಾರ್ ದಿಲ್ಲಿಯ ಸಿವಿಲ್ ಲೈನ್ಸ್ ನಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಪ್ ನಾಯಕಿ ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ. ಇದರ ಬೆನ್ನಿಗೇ ಸ್ವಾತಿ ಮಲಿವಾಲ್ ರ ಆರೋಪಕ್ಕೆ ಪ್ರತಿಕ್ರಿಯಿಸಿರುವ ನೀಡಿರುವ ಅರವಿಂದ್ ಕೇಜ್ರಿವಾಲ್ ನಿವಾಸವು, ಶುಕ್ರವಾರ ಮಧ್ಯಾಹ್ನ 52 ಸೆಕೆಂಡ್ ಗಳ ಮೊಬೈಲ್ ಫೋನ್ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಆ ವಿಡಿಯೊದಲ್ಲಿ ಮನೆಯನ್ನು ತೊರೆಯುವಂತೆ ತಮಗೆ ಸೂಚಿಸಿದ ಭದ್ರತಾ ಅಧಿಕಾರಿಗಳೊಂದಿಗೆ ಸ್ವಾತಿ ಮಲಿವಾಲ್ ವಾಗ್ವಾದ ನಡೆಸುತ್ತಿರುವುದು ಹಾಗೂ ಕೂಗಾಡುತ್ತಿರುವುದು ಕಂಡು ಬಂದಿದೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸ್ವಾತಿ ಮಲಿವಾಲ್ ‘ರಾಜಕೀಯ ಹಲ್ಲೆಕೋರ’ ಎಂಬ ಪದವನ್ನೂ ಬಳಸಿದ್ದು, ಈ ಪದವು ಕೇಜ್ರಿವಾಲ್ ರನ್ನು ಗುರಿಯಾಗಿಸಿಕೊಂಡಿದೆ ಎಂದು ಹಲವರು ವ್ಯಾಖ್ಯಾನಿಸಿದ್ದಾರೆ.

ಸೋಮವಾರ ಸ್ವಾತಿ ಮಲಿವಾಲ್ ಅವರ ಹೇಳಿಕೆಯನ್ನು ಆಧರಿಸಿ ಬಿಭವ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ದಿಲ್ಲಿ ಪೊಲೀಸರು, ನಾವು ಕೇಜ್ರಿವಾಲ್ ನಿವಾಸದಿಂದ ಎರಡು ಕರೆಗಳನ್ನು ಸ್ವೀಕರಿಸಿದ್ದೆವು ಎಂದು ಹೇಳಿದ್ದಾರೆ. ಆ ಫೋನ್ ಸಂಖ್ಯೆಯು ಸ್ವಾತಿ ಮಲಿವಾಲ್ ಹೆಸರಿನಲ್ಲಿ ನೋಂದಣಿಗೊಂಡಿದ್ದರೂ, ಕರೆ ಮಾಡಿದ ವ್ಯಕ್ತಿಯು ತನ್ನ ಗುರುತನ್ನು ಹೇಳಿಕೊಂಡಿರಲಿಲ್ಲ ಎಂದೂ ಮಾಹಿತಿ ನೀಡಿದ್ದಾರೆ.

ಸ್ವಾತಿ ಮಲಿವಾಲ್ ತಮ್ಮ ಟ್ವೀಟ್ ನಲ್ಲಿ ವ್ಯಕ್ತಪಡಿಸಿರುವ ಆಕ್ರೋಶ ಹಾಗೂ ವಿಡಿಯೊ ಎರಡರ ಕುರಿತೂ ಆಪ್ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News