ಉಪಚುನಾವಣೆ: 9 ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಗೆಲುವು; ಹಮೀರ್‍ಪುರ ಬಿಜೆಪಿ ತೆಕ್ಕೆಗೆ

Update: 2024-07-13 08:56 GMT

Photo: PTI

ಹೊಸದಿಲ್ಲಿ: ಮುಖ್ಯಮಂತ್ರಿ ಸುಖ್ವೀಂದರ್ ಸಿಂಗ್ ಸುಖು ಅವರ ಪತ್ನಿ ಹಾಗೂ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಕಮಲೇಶ್ ಪಾಟೀಲ್ ಅವರು ಹಿಮಾಚಲ ಪ್ರದೇಶದ ದೆಹ್ರಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ.

ಮೈತ್ರಿಕೂಟದ ಅಂಗಪಕ್ಷವಾಗಿರುವ ಆಮ್ ಆದ್ಮಿ ಪಾರ್ಟಿ, ಪಂಜಾಬ್‍ನ ಜಲಂಧರ್ ಪಶ್ಚಿಮ ಕ್ಷೇತ್ರವನ್ನು ಗೆದ್ದಿದೆ.

ಆಮ್ ಆದ್ಮಿ ಪಕ್ಷದ ಮೋಹಿಂದರ್ ಭಗತ್ ಅವರು ಈ ಕೇತ್ರದಿಂದ 30 ಸಾವಿರಕ್ಕೂ ಅಧಿಕ ಮತಗಳ ಗೆಲುವು ಸಾಧಿಸಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಪಶ್ಚಿಮ ಬಂಗಾಲದ ಎಲ್ಲ ನಾಲ್ಕು ಕ್ಷೇತ್ರಗಳನ್ನು ಗೆದ್ದುಕೊಂಡಿದೆ.

ಅಮರವಾಡ ಕ್ಷೇತ್ರದ ಎಣಿಕೆಯ ಅಂಕಿ ಅಂಶವನ್ನು 18ನೇ ಸುತ್ತಿನ ಬಳಿಕ ತಡೆಹಿಡಿಯಲಾಗಿದೆ. 20ನೇ ಸುತ್ತಿನ ಎಣಿಕೆಯಲ್ಲಿ ಎರಡು ಇವಿಎಂಗಳು ನಿಷ್ಕ್ರಿಯವಾಗಿವೆ. 19ನೇ ಸುತ್ತಿನ ಬಳಿಕ ಬಿಜೆಪಿಯ ಕಮಲೇಶ್ ಶಾ 1747 ಮತಗಳ ಅಂತರದಿಂದ ಮುಂದಿದ್ದಾರೆ.

ತಮಿಳುನಾಡಿನಲ್ಲಿ ಡಿಎಂಪಿ ಅಭ್ಯರ್ಥಿ ಅಣ್ಣಿಯೂರು ಸಿವಾ ಅವರು ವಿಕ್ರವಂಡಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಉತ್ತರಾಖಂಡದ ಮಂಗಲೋರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಖ್ವಾಝಿ ಮೊಹ್ಮದ್ ನಿಜಾಮುದ್ದೀನ್ ಜಯ ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News