ಬಿಹಾರ: ಕಳೆದ 24 ಗಂಟೆಗಳಲ್ಲಿ ಬಿಸಿಲಿನ ತಾಪಕ್ಕೆ 10 ಚುನಾವಣಾ ಸಿಬ್ಬಂದಿ ಸಹಿತ 14 ಮಂದಿ ಬಲಿ
Update: 2024-05-31 12:03 GMT
ಪಾಟ್ನಾ: 10 ಮಂದಿ ಚುನಾವಣಾ ಸಿಬ್ಬಂದಿಗಳ ಸಹಿತ 14 ಜನರು ಬಿಹಾರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಬಿಸಿಲಿನ ತಾಪಕ್ಕೆ ಬಲಿಯಾಗಿದ್ದಾರೆ.
ಹೆಚ್ಚಿನ ಸಾವುಗಳು ಭೋಜ್‌ಪುರ್‌ನಲ್ಲಿ ಸಂಭವಿಸಿವೆ. ಇಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಐದು ಮಂದಿ ಅಧಿಕಾರಿಗಳು ಮೃತಪಟ್ಟಿದ್ದಾರೆ. ಮೂವರು ಅಧಿಕಾರಿಗಳು ರೋಹ್ತಾಸ್‌ನಲ್ಲಿ ಹಾಗೂ ತಲಾ ಒಬ್ಬರು ಕೈಮೂರ್ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ಮೃತಪಟ್ಟಿದ್ದಾರೆ. ಉಳಿದಂತೆ ರಾಜ್ಯದ ಇತರೆಡೆ ನಾಲ್ಕು ಜನರು ಬಿಸಿಲಿನ ತಾಪಕ್ಕೆ ಬಲಿಯಾಗಿದ್ದಾರೆ.
ಮೃತರ ಕುಟುಂಬಗಳಿಗೆ ಪರಿಹಾರ ವಿತರಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಹಲವೆಡೆ ತಾಪಮಾನ 44 ಡಿಗ್ರಿ ಸೆಲ್ಸಿಯಸ್ ದಾಟಿದೆ, ಗುರುವಾರ ಬುಕ್ಸಾರ್‌ನಲ್ಲಿ ಗರಿಷ್ಠ 47.1 ಡಿಗ್ರಿ ತಾಪಮಾನ ದಾಖಲಾಗಿದೆ.