ಬಿಹಾರದ ಶೇ. 95.49 ಜನರಲ್ಲಿ ಯಾವುದೇ ವಾಹನಗಳಿಲ್ಲ

Update: 2023-11-08 16:55 GMT

ಪಾಟ್ನಾ: ಬಿಹಾರದ ಶೇ. 95.49 ಜನರು ಯಾವುದೇ ವಾಹನಗಳನ್ನು ಹೊಂದಿಲ್ಲ ಎಂದು ಜಾತಿ ಗಣತಿಯ ವರದಿ ಹೇಳಿದೆ.

ಇದಕ್ಕೆ ವ್ಯತಿರಿಕ್ತವಾಗಿ ಕೇವಲ ಶೇ. 3.8 ಜನರು ಸ್ವಂತ ದ್ವಿಚಕ್ರ ವಾಹನ ಹಾಗೂ ಕೇವಲ ಶೇ. 0.11 ಜನರು ಸ್ವಂತ ಕಾರುಗಳನ್ನು ಹೊಂದಿದ್ದಾರೆ.

ಬಿಹಾರದಿಂದ ವಲಸೆ ಹೋಗಿರುವ ಕುರಿತು ಒಳನೋಟಗಳನ್ನು ನೀಡಿರುವ ಈ ಜಾತಿ ಗಣತಿಯ ಸಮಗ್ರ ವರದಿ, 45.78 ಲಕ್ಷ ಮಂದಿ ಇತರ ರಾಜ್ಯಗಳಲ್ಲಿ ಉದ್ಯೋಗಿಗಳಾಗಿದ್ದಾರೆ. 2.17 ಲಕ್ಷ ಜನರು ವಿದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದೆ.

ಬಿಹಾರದ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಲಾದ ಈ ವರದಿ ರಾಜ್ಯದ 13.7 ಕೋಟಿ ಜನರ ಪೈಕಿ 12.48 ಕೋಟಿ ಜನರು ಯಾವುದೇ ವಾಹನಗಳನ್ನು ಹೊಂದಿಲ್ಲ ಎಂಬುದನ್ನು ಸೂಚಿಸಿದೆ.

ವರದಿಯ ಪ್ರಕಾರ ಕೇವಲ 49.68 ಲಕ್ಷ ಜನರು ಅಂದರೆ, ಜನಸಂಖ್ಯೆಯ ಸರಿ ಸುಮಾರು ಶೇ. 3.8 ಜನರು ಸ್ವಂತ ದ್ವಿಚಕ್ರ ವಾಹನವನ್ನು ಹೊಂದಿದ್ದಾರೆ. ಅತ್ಯಲ್ಪ 5.72 ಲಕ್ಷ ಜನರು ಅಂದರೆ ಕೇವಲ ಶೇ. 0.11 ಜನರು ಮಾತ್ರ ಕಾರುಗಳನ್ನು ಹೊಂದಿದ್ದಾರೆ.

ಕೇವಲ 1.67 ಲಕ್ಷ ಜನರು ಅಥವಾ ಶೇ. 0.13 ಜನರು ಟ್ರಾಕ್ಟರ್ ಹೊಂದಿದ್ದಾರೆ. ಸಾಮಾನ್ಯ ವರ್ಗದ 2.01 ಕೋಟಿ ಜನರ ಪೈಕಿ 11.99 ಲಕ್ಷ ಜನರು ಸ್ವಂತ ದ್ವಿಚಕ್ರ ವಾಹನವನ್ನು ಹೊಂದಿದ್ದಾರೆ. 2.17 ಲಕ್ಷ ಜನರ ಪೈಕಿ 23.738 ಜನರು ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ವಲಸೆ ಹೋಗಿದ್ದಾರೆ.

ವಿದೇಶಗಳಲ್ಲಿ ಉದ್ಯೋಗದಲ್ಲಿ ಇರುವವರ ಪೈಕಿ 76.326 ಜನರು ಸಾಮಾನ್ಯ ವರ್ಗದವರು. ಅದೇ ರೀತಿ ಬಿಹಾರದ 45,78,669 ಮಂದಿ ಅಂದರೆ, ಜನಸಂಖ್ಯೆಯ ಸರಿಸುಮಾರು ಶೇ. 3.5 ಮಂದಿ ಇತರ ರಾಜ್ಯಗಳಲ್ಲಿ ಉದ್ಯೋಗಿಗಳಾಗಿದ್ದಾರೆ.

215 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅತಿ ಹಿಂದುಳಿದ ವರ್ಗಗಳ ಆರ್ಥಿಕ ಪರಿಸ್ಥಿತಿಯ ಕುರಿತ ವರದಿಯನ್ನು ಬಿಹಾರ್ ಸರಕಾರ ಮಂಗಳವಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News