ಉತ್ತರ ಪ್ರದೇಶ: ಆನ್ ಲೈನ್ 'ನಿಖಾಹ್' ಸಮಾರಂಭದಲ್ಲಿ ಪಾಕಿಸ್ತಾನಿ ಯುವತಿಯನ್ನು ವರಿಸಿದ ಬಿಜೆಪಿ ನಾಯಕನ ಪುತ್ರ

Update: 2024-10-20 06:23 GMT

(Screengrab: X/@govindprataps12)

ಉತ್ತರ ಪ್ರದೇಶ: ಬಿಜೆಪಿ ನಾಯಕನೋರ್ವನ ಪುತ್ರ ಆನ್ ಲೈನ್ ಮೂಲಕ ಪಾಕಿಸ್ತಾನದ ಯುವತಿಯನ್ನು ʼನಿಖಾಹ್ʼ ಮಾಡಿಕೊಂಡ ಘಟನೆ ಉತ್ತರಪ್ರದೇಶದ ಜೌನ್ಪುರದಲ್ಲಿ ನಡೆದಿದೆ.

ಬಿಜೆಪಿ ಕಾರ್ಪೊರೇಟರ್ ತಹಸೀನ್ ಶಾಹಿದ್ ಅವರ ಹಿರಿಯ ಮಗ ಮುಹಮ್ಮದ್ ಅಬ್ಬಾಸ್ ಹೈದರ್ ಮತ್ತು ಪಾಕಿಸ್ತಾನದ ಲಾಹೋರ್ ನಿವಾಸಿ ಅಂದಲೀಬ್ ಝೊಹರ ಅವರ ನಿಕಾಹ್ ಆನ್ ಲೈನ್ ಮೂಲಕ ನಡೆದಿದೆ.

ವರ ಪಾಕಿಸ್ತಾನದ ವೀಸಾಗೆ ಅರ್ಜಿ ಸಲ್ಲಿಸಿದರೂ ಎರಡು ದೇಶಗಳ ನಡುವೆ ನಡೆಯುತ್ತಿರುವ ಕೆಲ ರಾಜಕೀಯ ಬೆಳವಣಿಗೆಯಿಂದ ಆತನಿಗೆ ವೀಸಾ ಸಿಕ್ಕಿಲ್ಲ. ವಧುವಿನ ತಾಯಿ ರಾಣಾ ಯಾಸ್ಮಿನ್ ಜೈದಿ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಅವರಿಗೆ ಲಾಹೋರ್ ನ ಆಸ್ಪತ್ರೆಯೊಂದರಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎರಡೂ ಕುಟುಂಬಗಳು ಆನ್ ಲೈನ್ ಮೂಲಕ ವಿವಾಹ ನಡೆಸಲು ತೀರ್ಮಾನಿಸಿದೆ.

ಶುಕ್ರವಾರ ರಾತ್ರಿ ಶಾಹಿದ್ ಮತ್ತು ಕುಟುಂಬ ಹಾಗೂ ವಧು ಝೊಹರ ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಆನ್ ಲೈನ್ ಮೂಲಕ ನಿಕಾಹ್ ನಡೆದಿದೆ. ಬಿಜೆಪಿ ಎಂಎಲ್ಸಿ ಬ್ರಿಜೇಶ್ ಸಿಂಗ್ ಪ್ರಿಶು ಮತ್ತು ಇತರ ಅತಿಥಿಗಳು ವಿವಾಹ ಸಮಾರಂಭದಲ್ಲಿ ಭಾಗವಹಿಸಿ ವಧು-ವರರಿಗೆ ಆಶೀರ್ವಾದ ಮಾಡಿದ್ದಾರೆ.

ನಿಖಾಹ್ ಬಳಿಕ ಮಾತನಾಡಿದ ಶಾಹಿದ್, ಝೊಹರಗೆ ಯಾವುದೇ ಅಡಚಣೆಯಿಲ್ಲದೆ ಭಾರತೀಯ ವೀಸಾ ಸಿಗುವ ಬಗ್ಗೆ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News